Friday 2 September 2011

ಓ ಭಾರತ ಮಾತೇ.. ನಿನ್ನ ಮಡಿಲಲ್ಲಿ ಇದೆಂತಹ (ಅ)ಸಮಾನತೆ!

ಭಾರತ ನಿಜವಾಗಿಯೂ ಜಾತ್ಯಾತೀತ ರಾಷ್ಟ್ರವೇ?
ಅಲ್ಲ ಎನ್ನುತ್ತದೆ ಮನಸ್ಸು.ಹೌದು ಎನ್ನುತ್ತದೆ ಸಂವಿಧಾನ. ಇವೆರಡರ ಗೊಂದಲದಲ್ಲಿ ಬುಧ್ಧಿ ಹೇಳುತ್ತದೆ ನಮಗೇಕೇ ಈ ಗೊಡವೆ ನಮ್ಮಕೆಲಸವನ್ನು ನಾವು ಮಾಡೋಣ ಎಂದು
ನಮ್ಮ ಸಂವಿಧಾನ ಸರ್ವ ಧರ್ಮ ಹಾಗು ಜಾತಿಯ ಸಮಾನತೆಯನ್ನು ಸಾರುತ್ತದೆ. ಆದರೆ ಒಂದು ಮಗು ಹುಟ್ಟಿದ ದಿನದಿಂದ ಸಾಯುವವರೆಗೂ ಸರಕಾರಿ ಕಛೆರಿಗಳಲ್ಲಿ ತುಂಬುವ ಪ್ರತಿಯೋಂದು ಫಾರ್ಮ್ ಗಳಲ್ಲೂ ಧರ್ಮ ಜಾತಿಯನ್ನು ತುಂಬಲೇಬೇಕು. ಎಲ್ಲಿದೆ ಸಮಾನತೆ.............?
ಹಿಂದುಳಿದ ವರ್ಗ ಎಂದರೆನು?
ಅಲ್ಪಸಂಖ್ಯಾತರು ಯಾರು?
ಈ ವಿಚಾರವನ್ನ ವಿಮರ್ಶಿಸಲೇ ಬೇಕಾದ ಪರಿಸ್ತಿತಿ ಈಗ ಸನ್ನಿಹಿತವಾಗಿದೆ.
ಹಿಂದುಳಿದ ವರ್ಗ ಎಂದರೆ ಯಾವುದರಲ್ಲಿ ಹಿಂದುಳಿದವರು ಎಂದು? ವಿದ್ಯೆಯಲ್ಲಿಯೋ,ಆರ್ಥಿಕತೆಯಲ್ಲಿಯೋ,ಬಲದಲ್ಲಿಯೋ, ಯಾವುದರಲ್ಲಿ ಹಿಂದುಳಿದವರು ಇವರು ಎನ್ನುವದನ್ನ ನೋಡಬೇಕಾಗಿದೆ.ಅಲ್ಪಸಂಖ್ಯಾತರು ಎನ್ನುವಾಗ ಯಾವವಿಚಾರದಿಂದ ಮತದ ಆಧಾರದ ಮೇಲೆ ಅಲ್ಪಸಂಖ್ಯಾತರು ಎಂದಾದರೆ ಹಿಂದು ಎನ್ನುವದು ಒಂದು ಜೀವನ ಪದ್ದತಿ. ಇದರಲ್ಲಿನ ಮತ,ಮತಾಚಾರ್ಯರು ಅದೆಷ್ಟೋ ಇವೆ ದ್ವೈತ,ಅದ್ವೈತ,ವಿಶಿಷ್ಠಾದ್ವೈತ,ಗಾಣಪತ್ಯ,ಶಾಕ್ತ,ವೈಷ್ಣವ,ಶೈವ,ಇತ್ಯಾದಿ ಇವೆಲ್ಲವೂ ಮತಗಳೇ ಆಗ ಇವೆಲ್ಲಮತಗಳಲ್ಲಿ ಯಾವ ಮತಸ್ಥರ ಸಂಖ್ಯೆ ಅಲ್ಪ ಎಂದು ನೋಡಬೇಕಾಗುತ್ತದೆ. ಹಾಗಾದರೆ ಎಲ್ಲಿ ಹೋಯಿತು ಸಮಾನತೆ?
ಈ ರೀತಿಯಲ್ಲಿ ಹಿಂದುಳಿದವರ್ಗ,ಅಲ್ಪಸಂಖ್ಯಾತರು ಇತ್ಯಾದಿ ಮೀಸಲಾತಿಯಿಂದ ನಮ್ಮ ಸಮಾಜ ಎಲ್ಲಿಗೆ ಹೋಹುತ್ತಿದೆ?
ಮಗು ಶಾಲೆಗೆ ಸೇರುವಾಗ ಮೀಸಲಾತಿ,ಉದ್ಯೋಗಕ್ಕೆ ಸೇರುವಾಗ ಮೀಸಲಾತಿ,ಪ್ರಮೋಶನ್ ವಿಚಾರದಲ್ಲಿ ಮೀಸಲಾತಿ ಎಲ್ಲಿಯವರೆಗೆ ಈ ಮೀಸಲಾತಿ........!!
ಮೀಸಲಾತಿಯನ್ನು ನೀಡಲು ಸರಿಯಾದ ಒಂದು ಕಾರಣವನ್ನು ನೀಡಿ ಎಂದು ಹೇಳಿದಾಗ ಇತಿಹಾಸವನ್ನು ಹೇಳುವ ವಿಚಾರವಾದಿಗಳು ಮುಸ್ಲಿಮರ ವಿಚಾರದಲ್ಲಿ ಇತಿಹಾಸವನ್ನು ಮರೆತೇಬಿಡುತ್ತಾರೆ. ಬ್ರಾಮ್ಹಣರು ಹಿಂದುಳಿದವರ್ಗವನ್ನು ತುಳಿದರು ಎನ್ನುವ ಬುದ್ದಿಜೀವಿಗಳು ಮುಸ್ಲೀಮರು ಹಿಂದುಗಳನ್ನುಕೊಂದರು ಎನ್ನುವದಿಲ್ಲ ಏಕೆ?ಮುಸ್ಲೀಮ್ ರಾಜರು ಹಿಂದೆ ಮಾಡಿರುವ ದೌರ್ಜನ್ಯ,ಆಕ್ರಮ.ಮತಾಂಧತೆ,ಇತ್ಯಾದಿಗಳನ್ನು ಹೇಳಿದರೆ ಈಗಿನ ಭಾರತೀಯ ಮುಸ್ಲಿಮರಿಗೆಲ್ಲಿ ನೋವಾದೀತೋ ಎಂದು ಮರುಗುವ ನಮ್ಮ ಹೃದಯವಂತ ವಿಚಾರವಾದಿಗಳ,ರಾಜಕಾರಣಿಗಳ,ಪ್ರಗತಿಪರರ ಹೃದಯ  ಬ್ರಾಮ್ಹಣರು ಹಿಂದುಳಿದ ವರ್ಗವನ್ನ ತುಳಿದರು ಎಂದಾಗ ಭಾರತೀಯ ಸಂವಿಧಾನಕ್ಕೆ ಬಧ್ಧರಾಗಿರುವ ಬ್ರಾಮ್ಹಣ ನವಪೀಳಿಗೆಗಳಿಗೆ ನೋವಾದೀತು ಎಂದೇಕೇ ಮಿಡಿಯುವದಿಲ್ಲ.ಹಾಗಾದರೆ ಬ್ರಾಮ್ಹಣರ ಪೂರ್ವಿಕರು ಸಮಾಜಕ್ಕೆ ಏನೂ ಕೊಡಿಗೆಗಳನ್ನೆ ನೀಡಿಯೇ ಇಲ್ಲವೇ "ಚಂದ್ರಗುಪ್ತಮೌರ್ಯನ (ಮೌರ್ಯಸಾಮ್ರಾಜ್ಯ) ಸುವರ್ಣಯುಗ ಎಂದು ಕರೆಸಿಕೊಂಡ  ಸಮ್ರಾಜ್ಯ ಸ್ಥಾಪನೆಗೆ ಕಾರಣ- ಆಚಾರ್ಯ್ ಚಾಣಕ್ಯ"
ಮುತ್ತುರತ್ನಗಳನ್ನ ದಾರಿಯಲ್ಲಿಟ್ಟು ಬಳ್ಳಗಳಲ್ಲಿ ಅಳೆದು ಮಾರಿದ ವಿಜಯನಗರ ಸಮ್ರಾಜ್ಯ ಸ್ಥಾಪನೆಗೆ ಕಾರಣ- ವಿದ್ಯಾರಣ್ಯರು, ಕದಂಬರ ಪುನರುತ್ಥಾನಕ್ಕೆ ಕಾರಣ ವಿಷ್ಣುಶರ್ಮ. ಹೀಗೆಯೆ ಎಷ್ಟೋ ಕೊಡುಗೆಯನ್ನ ಬ್ರಾಮ್ಹಣರು ಈ ದೇಶಕ್ಕೆ ನೀಡಿದ್ದಾರೆ.ಮುಸ್ಲೀಮ್ ಪೂರ್ವಿಕರು ಮಾಡಿರುವ ದೌರ್ಜನ್ಯ,ಆಕ್ರಮಣ.ಇತ್ಯಾದಿಗಳ ಫಲವಾಗಿ ಅವರಿಗೆ (ಅಲ್ಪಸಂಖ್ಯಾತರು) ಮಣೆ. ಬ್ರಾಮ್ಹಣರ ಪೂರ್ವಿಕರು ಹಾಗೂ ಸಮಾಜದಲ್ಲಿ ನೆಡೆದುಕೊಂಡು ಬಂದ ಪದ್ದತಿಯಿಂದಾಗಿ ಈಗಿನ ನವ ಪೀಳಿಗೆಗೆ ಶಿಕ್ಷೆ ಚೆನ್ನಾಗಿದೆ ಸರಕಾರ(ಸಂವಿಧಾನ)ದ "ಒಂದುಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ" ಎನ್ನುವ ಸಮಾನತಾವಾದ. ಮುತ್ತಜ್ಜ ಮಾಡಿದತಪ್ಪಿಗೆ ಮರಿಮಗನಿಗೇಕೆ ಶಿಕ್ಷೆ?

   ಹಾಗೆಂದ ಮಾತ್ರಕ್ಕೆ ಮೀಸಲಾತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೆನೆ ಎಂದಲ್ಲ.ಆದರೆ ಎಲ್ಲಾಕ್ಷೇತ್ರದಲ್ಲೂ ಮೀಸಲಾತಿ ನೀಡಿದಾಗ ಸಮಾಜದಲ್ಲಿ ಆಗುವ ಹಾನಿ,ದುಷ್ಪರಿಣಾಮಗಳು ಏನು ಎಂಬುದನ್ನು ವಿಚಾರವಾದಿಗಳು,ರಾಜಕಾರಣಿಗಳು ಅರಿಯಬೇಕು ಎಂಬುದು ನನ್ನ ಭಾವ.ಮೀಸಲಾತಿ ಕಾರಣದಿಂದ ಎಷ್ಟು ಪ್ರತಿಭಾಪಲಾಯನವಾಗುತ್ತಿದೆ.ಇದನ್ನ  ವಿಚಾರವಾದಿಗಳೆನಿಸಿಕೊಂಡವರು ವಿಚಾರಮಾಡಲಿ.  ೩೫% ೪೦% ಅಂಕವನ್ನ ಗಳಿಸಿರುವ ಒಂದು ವ್ಯಕ್ತಿ ಶಿಕ್ಷಕನಾಗಿ ಆತ ಮುಂದಿನ ಸಮಾಜವನ್ನ ಹೇಗೆ ಕಟ್ಟಬಲ್ಲ?
೩೫% ೪೦% ಅಂಕವನ್ನ ಗಳಿಸಿರುವ ಒಂದು ವಿದ್ಯಾರ್ಥಿ ವೈದ್ಯನಾಗಿ ರೋಗಿಗಳಿಗೆ ಹೇಗೆತಾನೆ ಸರಿಯಾದ ಔಷಧ ನೀಡಬಲ್ಲ?
ಕೆಲವೊಂದು ಕ್ಷೇತ್ರದಲ್ಲಿ ಹಾಗೂ ಪ್ರಾಥಮಿಕ ಹಾಗೂ ಪೌಢ ಶಿಕ್ಷಣದಲ್ಲಿ ಮೀಸಲಾತಿಯನ್ನ ನೀಡಲಿ ನಂತರದ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕವನ್ನು ಹೊಂದಿದ್ದರೆ ಮಾತ್ರ ಶುಲ್ಕಗಳ ವಿಚಾರದಲ್ಲಿ ಮಾತ್ರ ರಿಯಾಯತಿಯನ್ನ ನೀಡಲಿ ಅದು ಆರ್ಥಿಕವಾಗಿ ಬಡವರಾಗಿದ್ದರೆ ಮಾತ್ರ . ಹಿಂದುಳಿದವರ್ಗ,ಅಲ್ಪಸಂಖ್ಯಾತರು ಇತ್ಯಾದಿ ಮೀಸಲಾತಿಯಿಂದ ಸಾಮಾಜಿಕ ಅಸಮಾನತೆ ಇನ್ನಾದರೂ ನಿಲ್ಲಲಿ.ಆರಕ್ಷನ್ ದಂತಹ ಸಿನಿಮಾ ಪ್ರದರ್ಷನನ್ನ ಮಾಡಲೂ ಅಡ್ಡಿ ಆತಂಕ ಇದೆ ಎಂದಾದರೆ ಈ ಮೀಸಲಾತಿಯ ಗುಂಗು ಎಷ್ಟರಮಟ್ಟಿಗೆ ಆವರಿಸಿದೆ ಯೋಚಿಸಿ
ಇನ್ನು ಸಂತಾನ ವಿಚಾರದಲ್ಲೂ ಇದೇ ರೀತಿಯ ಸಮಾನತೆ
ಮುಸ್ಲೀಮರಿಗೆ ಎಷ್ಟು ಬೇಕಾದರೂ ಮದುವೆ ಹಾಗೂ ಮಕ್ಕಳು ಕಾರಣ ಅವರ ಧರ್ಮ
ಹಿಂದುಗಳ ವೇದದಲ್ಲಿಯೂ ಹೇಳಿದೆ "ಪ್ರಜಾತಂತುಂ ಮಾವ್ಯವಛ್ಛೆಸಿ"ಎಂಬುದಾಗಿ ಅಂದರೆ ಹಿಂದುಗಳಿಗೂ ಕುಟುಂಬ ಯೋಜನೆ ಬೇಡ ಎನ್ನಬಹುದಿತ್ತು . ಈ ಎಲ್ಲಾ ವಿಚಾರವನ್ನ ಗಮನಿಸಿದಾಗ ಮರುಗುವ ಮನಸ್ಸು ಹೇಳುವುದು .....................   "ಓಭಾರತಮಾತೇ ನಿನ್ನ ಮಡಿಲಲ್ಲಿಇದೆಂತಹ(ಅ)ಸಮಾನತೆ "                                                                                                             

Thursday 4 August 2011

ಭಯೋತ್ಪಾದನೆಗಿಲ್ಲ ಭಗವದೀತೆಗೇಕೆ ಅಪಸ್ವರ?

ರಾಷ್ಟ್ರವ್ಯಾಪಿ ಭಯೋತ್ಪಾದಕರ ಕುಕೃತ್ಯಗಳು ವಿಜ್ರಂಭಿಸುತ್ತಿವೆ.ಅದೆಷ್ಟೋ ಅಮಾಯಕರು ಬಾಂಬ್ ಧಾಳಿಗೆ ಸಿಲುಕಿ ಮೃತಪಟ್ಟರೆ ಹಲವು ನತದೃಷ್ಟರು ಗಾಯಾಳುಗಳಾಗಿದ್ದಾರೆ. ವಿಚಾರವಾದಿಗಳು ಅನ್ನಿಸಿಕೊಂಡವರು ಈ ಕುರಿತು ಚಿಂತನ-ಮಂಥನವನ್ನು ಹರಿಬಿಡದೇ... ಭಗವದ್ಗೀತೆಯನ್ನು ಉಲ್ಲೇಖಿಸಿ ಮನಸೋ ಇಚ್ಛೆ ಟೀಕಿಸುವ ಪರಿ ಬುದ್ಧಿಜೀವಿಗಳೆನಿಸಿಕೊಂಡವರಿಗೆ ತಕ್ಕುದೇ? ಈ ಚರ್ಚೆ ಪಸರಿಸಿದೆ ಭಯೋತ್ಪಾದನೆಗಿಲ್ಲ ಭಗವದೀತೆಗೇಕೆ  ಅಪಸ್ವರ?
ಎಂಬ ಪ್ರಶ್ನೆ ಮನೆ-ಮನಗಳಲ್ಲಿ ಮೂಡಿದೆ.
ಉತ್ತರಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಶ್ರೀಗಳು ರಾಜ್ಯದ ೨೫ ಜಿಲ್ಲೆಗಳಲ್ಲಿ ಭಗವದ್ಗೀತಾ ಅಭಿಯಾನವನ್ನು ಕಳೆದ ಮೂರು-ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನೆಡೆಸಿಕೊಂಡು ಬಂದಿದ್ದಾರೆ ಭಗವದ್ಗೀತೆಯ ಕುರಿತು ಯಾರೂ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿರಲಿಲ್ಲ. ಈಚೆಗೆ ಕೋಲಾರದಲ್ಲಿ ಎಸ್.ಎಫ್.ಐನ ಐದಾರು ಮಂದಿ ಭಗವದ್ಗೀತೆಯ ಅಭಿಯಾನದ ಆವರಣದಲ್ಲಿ `ಗದ್ದಲ` ಎಬ್ಬಿಸಿದ ನಂತರ ಕೆಲವರು ಏಕಾಏಕಿ ಭಗವದ್ಗೀತೆಯ ಕುರಿತು ಹಾಗೂ ಅಭಿಯಾನದ ಕುರಿತು ಟೀಕಿಸಲಾರಂಭಿಸಿದ್ದು...ಭಗವದ್ಗೀತೆಗೆ ರಾಜಕೀಯ ಬಣ್ಣ ಬಳಿಯುವ ಹುನ್ನಾರ? ಆರಂಭ ಕಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಭಗವದ್ಗೀತೆ ಧರ್ಮ ಪ್ರಸಾರಕ  ಗ್ರಂಥವಲ್ಲ.ಇದು ಸಮಗ್ರ ಮನುಕುಲಕ್ಕೆ ದಾರಿದೀಪ ಎಂಬುದು ಪ್ರಾಜ್ಞರ ಅಭಿಮತವಾಗಿದೆ.ಭಗವದ್ಗೀತೆ ಮನುಷ್ಯನ ಮನೋವಿಕಾಸದ ದಾರಿಯನ್ನು ಭೋಧಿಸುವ ಮನಃಶಾಸ್ತ್ರ ಎಂದು ಮನೋವಿಜ್ಞಾನಿಗಳೇ  ಅಭಿಪ್ರಾಯಿಸಿದ್ದಿದೆ.
ಇದೊಂದು ಯೋಗಗ್ರಂಥ. ಭಗವದ್ಗೀತೆ ಒಂದು ಅಮೂಲ್ಯ ಜೀವನ ವಿಜ್ಞಾನ (ಸೈನ್ಸ್ ಆಫ್ ಲೀವಿಂಗ್). ಭಗವದ್ಗೀತೆಯು ರಾಷ್ಟ್ರೀಯ ಗ್ರಂಥ. ಇದು ಮತೀಯ ಗ್ರಂಥವಲ್ಲ. ಗೀತೆಯ ಕುರಿತಾಗಿ ಇಷ್ಟೋಂದು ವಿಶೀಷ ಉಲ್ಲೇಖಗಳಿರುವಾಗ... ಕೆಲವರು ಜಾತ್ಯಾತೀತ,ಸೆಕ್ಯುಲರ್ ಶಬ್ದಬಳಸಿ ತಾರ್ಕಿಕ ವಾದದೊಳಗೆ ಭಗವದ್ಗೀತೆಯನ್ನು ಸಿಲುಕಿಸುವ ಯತ್ನನಡೆಸಿದ್ದಾರೆ.ವ್ಯಂಗ್ಯವೆಂದರೆ ಭಗವದ್ಗೀತೆಯನ್ನು ಓದದವರೂ.. ಅರ್ಥೈಸಿಕೊಳ್ಳದವರೂ ಹೇಳಿಕೆಗಳ ಪುಂಗಿ ಊದುತ್ತಿದ್ದಾರೆ
ಅಭಿಯಾನ ಆರಂಭಗೊಂಡು ಸುದಿರ್ಘಅವದಿಯ ನಂತರ ಭಗವದ್ಗೀತೆಯನ್ನು ಹಾಗೂ ಗೀತಾ ಅಭಿಯಾನವನ್ನು ಪ್ರಶ್ನಿಸುತ್ತಾರೆಂದರೆ...ಪ್ರಶ್ನಿಸುವ ಮಂದಿ ಇಷ್ಟುದಿನ ಎಲ್ಲಿ ಕಳೆದುಹೋಗಿದ್ದರು? ಎಂಬ ಸಂದೇಹ,ಸಂಶಯ ಒಡಮೂಡುವುದು ಸಹಜವಲ್ಲವೇ? ಈ ಹಿನ್ನೆಲೆಯಲ್ಲಿ ಗೀತಾ ಅಭಿಯಾನದ ರೂವಾರಿ  ಸೋಂದಾ ಸ್ವರ್ಣವಲ್ಲಿ ಶ್ರೀಗಳೊಂದಿಗೆ `ಕರ್ಮವೀರ` ವಿಶೇಷ ಸಂದರ್ಶನ ನಡೆಸಿದೆ ಹುಟ್ಟುಹಾಕಲ್ಪಟ್ಟ ಹಲವು ಪ್ರಶ್ನೆಗಳಿಗೆ ಶ್ರೀಗಳು ಉತ್ತರಿಸಿದ್ದಾರೆ.
ಕರ್ಮವೀರ: ಕಳೆದ ಮೂರು ವರ್ಷದಿಂದಲೂ ರಾಜ್ಯದಲ್ಲಿ ಎಲ್ಲರ ವಿಚಾರ ಗೀತಾಅಭಿಯಾನದ ಪರವಾಗಿಯೆ ಇತ್ತು. ಕೋಲಾರದ ಘಟನೆ ಭಗವದ್ಗೀತಾ ಅಭಿಯಾನದ ವಿರುದ್ಧವಾಗಿ ಧ್ವನಿಯನ್ನು ಹುಟ್ಟುಹಾಕಿತು.ಈ ಬಗ್ಗೆ ತಾವು ಏನು ಹೇಳುತ್ತೀರಿ?
ಶ್ರೀಗಳು: ಭಗವದ್ಗೀತಾ ಅಭಿಯಾನ ಪ್ರಾರಂಭವಾಗಿ ಮೂರುವರೆ ವರ್ಷವಾಯ್ತು.ಅದರ ತಯಾರಿ ಆರಂಭಗೊಂಡು ನಾಲ್ಕುವರೆ ವರ್ಷವೇ ಆಗಿದೆ.ಬೇರೆಬೇರೆ ಜಿಲ್ಲೆಗಳಲ್ಲೆಲ್ಲ ನಡೆದಿದೆ. ಈ ಹಿಂದೆ ಯಾವುದೇ ಜಿಲ್ಲೆಯಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ ಎಂದಿಲ್ಲ. ಆದರೆ ಬಹಳ ಸ್ವಲ್ಪ ವ್ಯಕ್ತವಾಗಿತ್ತು.ಅಲ್ಲದೇ ಅದು ರಾಜ್ಯವ್ಯಾಪ್ತಿಯನ್ನು ಪಡೆದಿರಲಿಲ್ಲ. ಎಲ್ಲೋ ಸಣ್ಣಧ್ವನಿ ಎದ್ದಿತ್ತು. ಅದು ತಾನಾಗಿಯೇ ಸುಮ್ಮನಾಯ್ತು. ಅದಕ್ಕೆ ಯಾರೂ ಉತ್ತರವನ್ನು ಕೊಡಲಿಲ್ಲ.ಚರ್ಚೆಯೂ ನೆಡೆಯಲಿಲ್ಲ. ಹಾಗೆ ಒಂದೆರೆಡುಕಡೆ ಆಗಿದ್ದಿದೆ.ಅದರ ಹೊರತಾಗಿ ಮತ್ಯಾವುದೇ ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಗಿರಲಿಲ್ಲ.

ಕೋಲಾರದ ಘಟನೆ ಇಷ್ಟು ವ್ಯಪ್ತಿಯನ್ನು ಪಡೆಯಲಿಕ್ಕೆ ಮುಖ್ಯ ಕಾರಣ ಮಾಧ್ಯಮಗಳೂ ಇರಬಹುದು.ಏಕೆಂದರೆ ಅಲ್ಲಿ ಆಗಿರುವ ಘಟನೆಯನ್ನು ತಕ್ಷಣ ರಾಜ್ಯವ್ಯಾಪಿಯಾಗಿ ಪ್ರಸಾರ ಮಾಡಿದವು ಮತ್ತು ಅತೀ ರಂಜಿತವಾಗಿ ಪ್ರಸಾರ ಮಾಡಲಾಯಿತು.ಹೀಗಾಗಿ ಈ ಘಟನೆ ರಾಜ್ಯವ್ಯಾಪಿಯಾಗಿ ಹರಡಿ ಭಗವದ್ಗೀತೆಯ ಕುರಿತಾಗಿ ಚಿಂತನೆ ನೆಡೆಸಲು ಕಾರಣವಾಯಿತು. ಈ ಬಗ್ಗೆ ಚಿಂತನೆ ನಡೆಯಲಿ. ಯಾಕೆಂದರೆ ಎಷ್ಟು ಪ್ರಶ್ನೆಗಳನ್ನು ಕೇಳಿದರೂ,ಎಷ್ಟು ಚರ್ಚೆಮಾಡಿದರೂ...ಎಲ್ಲದಕ್ಕೂ ಉತ್ತರ ಕೊಡುವ ಸಾಮರ್ಥ್ಯ ಭಗವದ್ಗೀತೆಗೆ ಇದೆ. ಚಿಂತನೆ-ಚರ್ಚೆಯನ್ನು ನಾವು ಯಾವಾಗಲೂ ಅಲ್ಲಗಳೆಯುವದಿಲ್ಲ. ಆಗ್ರಹಪೂರ್ವಕವಾದ ಚರ್ಚೆ ಬೇಡ. ಮತ್ತೆ ಇದನ್ನು ರಾಜಕೀಯಕ್ಕೆ ಹಚ್ಚಬಾರದು. ರಾಜಕೀಯ ಸಂಬಂಧ ಕಲ್ಪಿಸಬಾರದು.
ಕರ್ಮವೀರ: ಕೋಲಾರದ ಘಟನೆಯ ನಂತರ, ವಿಚಾರವಾದಿಗಳು ಎಂದು ಗುರುತಿಸಿಕೊಂಡವರು ನಾಡಿನಜನತೆಯ ದಿಕ್ಕು ತಪ್ಪಿಸುತ್ತಾ ಇದ್ದಾರೆ ಎನ್ನುವ ಭಾವನೆಇದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನು?
ಶ್ರೀಗಳು: ಇದು ಸತ್ಯವಾದ ಸಂಗತಿ.ವಿಚಾರವಂತರು ಎಂದು ಗುರುತಿಸಿಕೊಂಡವರೆಲ್ಲರೂ ಸಾರ್ವಜನಿಕವಾಗಿ ಇಷ್ಟರವರೆಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿಲ್ಲ. ಕೆಲವರು ಮಾತ್ರ ಹೇಳಿದ್ದಾರೆ. ಆದರೆ ವಿಚಾರವಂತರು ಎನಿಸಿಕೊಂಡವರೂ ಕೂಡಾ ಈ ಅಭಿಯಾನವನ್ನು ಸರಕಾರದ್ದು ಅಥವಾ ಬಿ.ಜೆ.ಪಿ ಪಕ್ಷದ್ದು ಅಥವಾ ಆರ್.ಎಸ್.ಎಸ್.ನವರದ್ದು ಎಂದು ವ್ಯಾಖ್ಯಾನ ಮಾಡಿಕೊಂಡಿದ್ದಾರೆ ಇದು ತಪ್ಪು.... ಇದು ಅವರು ತಪ್ಪಾಗಿ ಮಾಡುತ್ತಿರುವ ಆಲೋಚನೆ. ಭಗವದ್ಗೀತೆಯಂತಹ ನೈತಿಕ,ಆಧ್ಯಾತ್ಮಿಕ ಮೌಲ್ಯಗಳನ್ನು ಭೊದಿಸುವಂತ ಗ್ರಂಥವನ್ನು ಎಲ್ಲಾ ರಾಜಕೀಯ ಪಕ್ಷದವರೂ ಎಲ್ಲಾ ವಿಚಾರವಂತರೂ ತಾಮುಂದು ತಾಮುಂದು ಎಂದು ಬೆಂಬಲಿಸಬೇಕಾಗಿತ್ತು. ಇದನ್ನು ಬೆಂಬಲಿಸುವುದೇ ಪ್ರತಿಷ್ಠೆ ಎನ್ನುವಂತಿದೆ ನಿಜವಾಗಿ ಈ ಗ್ರಂಥ. ಅದರ ಬದಲಾಗಿ ವಿಚಿತ್ರವಾಗಿ ಟೀಕಿಸುವದರ ಮೂಲಕ ಜನತೆಗೆ ತಪ್ಪು ಮಾರ್ಗದರ್ಶನ ಮಾಡುತ್ತಿದ್ದಾರೆ ಎನ್ನುವುದು ವಿಷಾದದ ಸಂಗತಿ. ಆದರೆ ನಮ್ಮ ಜನರಲ್ಲಿ ಎಲ್ಲರೂ ಅದಕ್ಕೆ ಮರುಳಾಗಲಿಲ್ಲ ಬಹಳ ಜನರು  ಅದನ್ನು ಸ್ವಯಂಪ್ರೇರಣೆಯಿಂದ ಬೆಂಬಲಿಸುತ್ತಿದ್ದಾರೆ. ಇದು ಸಮಾದಾನದ ಸಂಗತಿ.
ಕರ್ಮವೀರ: ಭಗವದ್ಗೀತೆ ಎಲ್ಲಾಧರ್ಮದವರಿಗೂ ಮಾದರಿ ಎನ್ನುವದಕ್ಕೆ ಪ್ರಭಲವಾದ ಉಲ್ಲೇಖವೇನು?
ಶ್ರೀಗಳು:ಒಂದಲ್ಲ ಹತ್ತಾರು ಹೇಳಬಹುದು. ಭಗವದ್ಗೀತೆ ಎಲ್ಲಾ ಮನುಷ್ಯರನ್ನು ಉದ್ದೆಶಿಸಿ ಹೇಳುತ್ತದೆ.ಯಾವುದೇ ಒಂದು ಜನಾಂಗವನ್ನು, ಅಥವಾ ಯಾವುದೇ ಒಂದು ಸೀಮಿತಪದೇಶದ ಜನಾಂಗವನ್ನು ಉದ್ದೇಶಿಸಿ ಹೇಳುವದೇ ಇಲ್ಲ. ಎಲ್ಲಾ ಮನುಷ್ಯನೂ ಕೂಡಾ  ಪರಮಾತ್ಮನ ಒಂದು ಅಂಶ."ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ" ಈಮಾತು ಪ್ರತಿಯೊಂದು ಮನುಷ್ಯನಿಗೂ ಅನ್ವಯಿಸುತ್ತದೆ. ಅಷ್ಟೇ ಅಲ್ಲ ಎಲ್ಲ ಪ್ರಾಣಿಗಳಿಗೂ ಪ್ರತೀ ಜೀವಕ್ಕೂ ಅನ್ವಯಿಸುತ್ತದೆ. "ಸರ್ವಸ್ಯ ಚಾಹಂ ಹೃದಿಸನ್ನಿವಿಷ್ಟಃ" ಪ್ರತಿಯೊಂದು ಜಿವದ ಅಂತರಂಗದಲ್ಲಿ ನಾನಿದ್ದೇನೆ ಎಂದು ಭಗವಂತ ಹೇಳುತ್ತಾನೆ. ಎಲ್ಲರ ಒಳಗಿರುವ ಅದ್ಭುತವಾದ ಚೈತನ್ಯವನ್ನು ಭಗವದ್ಗೀತೆ ಪ್ರತಿಪಾದನೆ ಮಾಡುತ್ತದೆ ಇಲ್ಲಿ ಅವನು-ಇವನು, ಮನುಷ್ಯ-ಪ್ರಾಣಿ ಎನ್ನುವ ಆಲೋಚನೆಯೆ ಭಗವದ್ಗೀತೆಯಲ್ಲಿ ಇಲ್ಲ. ಎಲ್ಲರ ಏಳ್ಗೆಯನ್ನು ಭಗವದ್ಗೀತೆ ಬಯಸುತ್ತದೆ.  ಇವತ್ತು ನಾವು ಕಾಣುತ್ತಿರುವ ವರ್ಗೀಕೃತ ಸಮಾಜ ಇದೆಯಲ್ಲ.. ಅದು ಭಗವದ್ಗೀತೆಯಲ್ಲಿ ಇಲ್ಲ ಇಣ್ದು ಬೇರೆ-ಬೇರೆ ಜಾತಿಯ ಹೆಸರಿನಲ್ಲಿ ಸಮಾಜವನ್ನು ಬೇಕಾದಷ್ಟು ಒಡೆದುಕೊಂಡಿದ್ದೆವೆ. ಆದಾರಿಯಲ್ಲಿ ಬಹಳಷ್ಟು ಮುಂದೆ ಬಂದುಬಿಟ್ಟಿದ್ದೇವೆ.ಭಗವದ್ಗೀತೆಯ ಚಿಂತನೆಯೊಳಗೆ ಈ ವಿಚಾರ ಇಲ್ಲ. ಎಲ್ಲರನ್ನು ಆದ್ಯಾತ್ಮಿಕ, ನೈತಿಕ ಮಾರ್ಗದಲ್ಲಿ  ಹೇಗೆ ಮೇಲೆತ್ತಬಹುದು ಎನ್ನುವುದು ಭಗವದ್ಗೀತೆಯ ಚಿಂತನೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಮೋಹ ,ಶೋಕ ಎಂಬ ಎರಡು ದೋಶಗಳಿರುತ್ತವೆ. ತನ್ನದೆನ್ನುವ ಮಮಕಾರವನ್ನು ಮತ್ತು ಅನೇಕ ವಿಧದ ತಪ್ಪು ತಿಳುವಳಿಕೆಯನ್ನ ಮೋಹ ಎನ್ನುತ್ತಾರೆ ಇದರಿಂದ ಬರುವ ಚಿಂತೆಯೇ ಶೋಕ ಇವೆರೆಡೂ ಎಲ್ಲ ಪ್ರಾಣಿಗಳಿಗೂ ಇರುತ್ತವೆ.
 ಮನುಷ್ಯನಿಗೆ ಸ್ವಲ್ಪ ಹೆಚ್ಚಿಗೆ ಇರುತ್ತವೆ. ಪ್ರತಿಯೊಬ್ಬ ಮನುಷ್ಯನಿಗೆ ಅಂತರಂಗದಲ್ಲಿರುವ ಶೋಕ ಅಥವಾ ದುಃಖವನ್ನು ಸ್ವತಃ ನಿವಾರಿಸಿಕೊಳ್ಳುವ ಮಾನಸಿಕ ಚಿಕಿತ್ಸೆಯನ್ನು ಭಗವದ್ಗೀತೆ ಕೊಡುತ್ತದೆ. ಇಲ್ಲೆಲ್ಲೂ ಸೀಮಿತ ದೃಷ್ಟಿ ಕಂಡುಬರುವುದೇ ಇಲ್ಲ ಭಗವದ್ಗೀತೆಯಲ್ಲಿ  ಸೀಮಿತ ದೃಷ್ಟಿ ಇದೆ ಎನ್ನುವವರು ಸರಿಯಾದ ಯಾವುದೆ ಉಲ್ಲೆಖವನ್ನು ನಮಗೆ ಕೊಡಲಿಲ್ಲ. ಕೊಡಲಿಕ್ಕೂ ಸಾಧ್ಯವಿಲ್ಲ.
ಕರ್ಮವೀರ: ನಮ್ಮ ರಾಷ್ಟ್ರದ ಸಂವಿಧಾನದಲ್ಲಿ ಸೆಕ್ಯುಲರ್(ಧರ್ಮ ನಿರಪೇಕ್ಷ) ಎಂಬ ಶಬ್ಧ ಇದೆ. ಸಂವಿಧಾನದಲ್ಲೆ ಈ ರೀತಿ ಇರುವಾಗ ಶಾಲೆಗಳಲ್ಲಿ ಭಗವದ್ಗೀತೆಯನ್ನು ಭೋಧಿಸುವದು ಎಷ್ಟರ ಮಟ್ಟಿಗೆ ಸರಿ?
ಶ್ರೀಗಳು: ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರವನ್ನೂ ಕೊಟ್ಟಿದ್ದಾರೆ. ಧರ್ಮಾನುಷ್ಠಾನವನ್ನು ಮಾಡಲಿಕ್ಕೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ವನ್ನು ನೀಡಿದ್ದಾರೆ. ಸರಕಾರ ಯಾವುದೇ ಒಂದೇ ಧರ್ಮವನ್ನು ಬೆಂಬಲಿಸಬಾರದು. ಇದು ಸೆಕ್ಯುಲರ್ ಶಬ್ಧದ ನಿಜವಾದ ತಾತ್ಪರ್ಯ. ನಮ್ಮ ದೃಷ್ಟಿಯಲ್ಲಿ ಸೆಕ್ಯುಲರ್ ಎನ್ನುವುದು ಸಂವಿಧಾನದ ಪಾರಿಭಾಷಿಕ ಶಬ್ಧ. ಸರ್ವ ಧರ್ಮಗಳಿಗೂ ಸಮಾನವಾದ ಗೌರವ ಎಂದರ್ಥ. ಆ ಅರ್ಥದಲ್ಲಿ ಇದು  ಪಾರಿಭಾಷಿಕ ಶಬ್ಧ. ಹೊರತು ಧರ್ಮವೇ ಬೇಡ ಎನ್ನುವ ಅರ್ಥವಲ್ಲ. ಆಡಳಿತ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೆ ಎಂದು ಅರ್ಥಮಾಡಿಕೊಳ್ಳಬೇಕು. ಸೆಕ್ಯುಲರ್ ಎನ್ನುವ ಶಬ್ಧಕ್ಕೆ ಧರ್ಮನಿರಪೇಕ್ಷ ಎನ್ನುವ ಅರ್ಥಕ್ಕೆ ನಮ್ಮ ಒಪ್ಪಿಗೆ ಇಲ್ಲ. ಇದಕ್ಕೆ ಬದಲಾಗಿ 'ಎಲ್ಲ ಧರ್ಮಗಳೂ ಸಮಾನ' ಎನ್ನುವ ಅರ್ಥ ಸರಿ ಎಂದು ನಮ್ಮ ಅಭಿಪ್ರಾಯ.
ಯಾಕೆಂದರೆ ಪ್ರತಿಯೊಬ್ಬ ಮನಿಷ್ಯನ ಜೀವನಕ್ಕೆ ಧರ್ಮ ಎನ್ನುವುದು ಬೇಕು. ಅದಿಲ್ಲದಿದ್ದರೆ  ಜೀವನದಲ್ಲಿ ಶಾಶ್ವತವಾದ ನೆಮ್ಮದಿ,ಶಾಂತಿಯನ್ನು ಪಡೆಯಲಿಕ್ಕೆ ಸಧ್ಯವೇ ಇಲ್ಲ. ಈ ದೇಶದವನೇ ಇರಬಹುದು ಅಥವಾ ಬೇರೆ ದೇಶದವನೇ ಇರಬಹುದು. ಎಲ್ಲ ದೇಶದಲ್ಲೂ   ಇದೆ. ಧರ್ಮ ಸಂಪೂರ್ಣವಾಗಿ ಇಲ್ಲದ ಯಾವುದೇ ದೇಶ ಪ್ರಪಂಚದಲ್ಲಿ ಇಲ್ಲ. ಸೆಕ್ಯುಲರ್ ಶಬ್ಧಕ್ಕೆ ಧರ್ಮವೇ ಬೇಡ ವ್ಯಾಖ್ಯಾನಮಾಡುವುದು ಸಂವಿಧಾನಕಾರರ ಅಭಿಪ್ರಾಯವಲ್ಲ. ಏಕೆಂದರೆ ಧಾರ್ಮಿಕ ಸ್ವಾತಂತ್ರ ಕೊಟ್ಟಿದ್ದಾರೆ. ಧರ್ಮವೇ ಬೇಡ ಎಂದಿದ್ದರೆ ಧಾರ್ಮಿಕ ಸ್ವಾತಂತ್ರ ಕೊಡುತ್ತಿರಲಿಲ್ಲ.ಆದ್ದರಿಂದ ಸೆಕ್ಯುಲರ್ ಎನ್ನುವ ಶಬ್ಧಕ್ಕೆ ಧರ್ಮನಿರಪೇಕ್ಷ  ಎಂದು ಅರ್ಥೈಸುವದು ಸರಿಯಲ್ಲ. ನಮ್ಮ ದೃಷ್ಟಿಯಲ್ಲಿ ಸರ್ವಧರ್ಮ ಸಮಭಾವ ಎನ್ನುವ ದೃಷ್ಟಿ ಇಟ್ಟುಕೊಳ್ಳಬೇಕು ಒಂದಿಷ್ಟು  ಧಾರ್ಮಿಕ ನಂಬಿಕೆಗಳು ಮನುಷ್ಯನಿಗೆ ಬೇಕು. ಸೆಕ್ಯುಲರ್ ಎಂಬ ಘೋಷಣೆಯಿರುವ ನಮ್ಮ ಸಂವಿಧಾನದ ಬಗ್ಗೆ ನಮಗೆ ಗೌರವ ಇದ್ದೆ ಇದೆ ಅಂಥ ಸಂವಿಧಾನವನ್ನು ಅನುಸರಿಸಿಕೊಂಡು ಬಂದಿದ್ದರೂ ಭಗವದ್ಗೀತೆಯನ್ನು ಹೇಳುವದಕ್ಕೆ  ಏನೂ ತೊಂದರೆ ಇಲ್ಲ.
ಕರ್ಮವೀರ: ಭಗವದ್ಗೀತೆಯಲ್ಲಿ ಸಾಮಾಜಿಕ ನ್ಯಾಯ ಇದೆ ಎನ್ನುವದಕ್ಕೆ ಏನು ಉಲ್ಲೆಖ?
ಶ್ರೀಗಳು:ಸಾಮಾಜಿಕ ನ್ಯಾಯ ಎಂದರೆ ಸಮಾನತೆ ಎಂದು ಅರ್ಥವನ್ನಿಟ್ಟುಕೊಂಡು ಕೆಳುತ್ತಿದ್ದೀರಿ ತಾನೆ? ಭಗವದ್ಗೀತೆ ಮುಖ್ಯವಾಗಿ 'ಸಮತ್ವ' ಮತ್ತು 'ಸಮಾನತೆ'ಯನ್ನು ಹೇಳುತ್ತದೆ.ಸಮತ್ವ ಎಂದರೆ ತನ್ನೊಳಗೆ ಯೋಗದ ಮೂಲಕ... ತನ್ನ ಉಸಿರಾಟದಲ್ಲಿ,ಮನಸ್ಸಿನಲ್ಲಿ,ಆರೋಗ್ಯದಲ್ಲಿ ಸಮಸ್ಥಿತಿಯನ್ನು ಸಾಧಿಸಬೇಕು. ಸಮಾನತೆ ಎಂದರೆ ಹೊರಗೆ... ಎಲ್ಲರನ್ನೂ ಸಮಾನರಾಗಿ ನೋಡುವಂತ ಒಂದು ದೃಷ್ಟಿ ಇದಕ್ಕೆ ಭಗವದ್ಗೀತೆಯಲ್ಲಿ ಬಹಳ ಉಲ್ಲೆಖಬರುತ್ತದೆ. ಉದಾಹರಣೆಗೆ ೬ನೇ ಅಧ್ಯಾಯದಲ್ಲಿ-
ಆತ್ಮೌಪಮ್ಯೇನ ಸರ್ವತ್ರ ಸಮಂ ಪಷ್ಯತಿ ಯೋರ್ಜುನ|
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ||
'ಯಾರು ತನ್ನಂತೆ ಪರರನ್ನು ನೋಡುತ್ತಾನೆಯೋ ಅವನು ನಿಜವಾದ ಯೋಗಿ' ಇದು ಈ ಶ್ಲೋಕದ ಸಂಕ್ಷಿಪ್ತ ತಾತ್ಪರ್ಯ. ಎಲ್ಲರೊಳಗೂ ತನ್ನಂತೆಯೇ  ನೋಡುವಂಥ ದೃಷ್ಟಿ ಬಂದರೆ ಮಾತ್ರ ಅವನು ಯೋಗದಲ್ಲಿ ಮುಂದುವರಿದಿದ್ದಾನೆ ಎಂದರ್ಥ. ಯೋಗದಲ್ಲಿ ಸಾಕಷ್ಟು ಮುಂದುವರಿದವನಿಗೆ ಅದು ಬರುತ್ತದೆ. ಅದು ಬರದೆ ಇದ್ದರೆ ಅವನ ಸಾಧನೆ ಪೂರ್ತಿಯಾಗಲಿಲ್ಲ ಎಒಂದು ಅರ್ಥೈಸಿಕೊಳ್ಳಬಹುದು. ೬ನೇ ಅಧ್ಯಾಯದಲ್ಲಿ ಯೋಗದ ನಿರೂಪಣೆ ಬರುತ್ತದೆ. ಆನಿರೂಪಣೆ ಮಾದೀದ ಕೊನೆಯಲ್ಲಿ ಈ ಮಾತು ಬರುತ್ತದೆ. ಯೋಗಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿಕ್ಕೆ ಈ ಮಾತನ್ನು ಹೇಳಿದ್ದಾನೆ. ಹೀಗೆ ಯೊಗ ಸಾಧನೆಯನ್ನೇ ಪ್ರಮುಖವಾಗಿ ಹೇಳುವ ಗ್ರಂಥ ಭಗವದ್ಗೀತೆ. ಭಗವದ್ಗೀತೆಯ ನಿಜವಾದ ಆದರ್ಶ 'ಸಮಾನತೆ' ಸಾಮಾಜಿಕ  ಅನ್ಯಾಯದ ವಿಷಯ ಭಗವದ್ಗೀತೆಯಲ್ಲಿ ಇಲ್ಲವೇ ಇಲ್ಲ
ಕರ್ಮವೀರ: ವಿವಿಧ ಧರ್ಮದವರೂ,ದಲಿತರೂ.ಈ ಹಿಂದೆ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಂಡಿದಾನ್ನು ಕೇಳಿದ್ದೆವೆ. ಹೀಗಿದ್ದಾಗ್ಯೂ  ಕೋಲಾರದ ಘಟನೆಯ ನಂತರ,ದಲಿತರ ಆಕ್ರೋಶ ಎನ್ನುವಂಥದ್ದು ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿದೆ.ಈ ಬಗ್ಗೆ ತಾವೇನು ಹೇಳುವಿರಿ?
ಶ್ರೀಗಳು: ಕೋಲಾರದ ಈ ಘಟನೆ ನಡೆಯಲು ಹಿನ್ನಲೆಯಲ್ಲಿ ಬೇರೆ ಯಾರೋ  ಇರಬಹುದೆಂದು ಕಾಣುತ್ತದೆ. ಹಾಗಿಲ್ಲದಿದ್ದರೆ ದಲಿತರು ಹಾಗೆ ಮಾಡುತ್ತಿರಲಿಲ್ಲವೇನೋ ಅನಿಸುತ್ತದೆ ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗೀತಾ ಅಭಿಯಾನ ನಡೆದಾಗ ದಲಿತರು,ಕ್ರಿಶ್ಚಿಯನ್ನರು,ಮುಸಲ್ಮಾನರು... ಇನ್ನೂ ಬೇರೆ-ಬೇರೆ ಸಮುದಾಯದವರೆಲ್ಲರೂ ಭಗವದ್ಗೀತೆಯನ್ನು ಕಲಿತಿದ್ದಾರೆ.
ಕರ್ಮವೀರ: ಇದು ಕೇಸರೀಕರಣದ ಹುನ್ನಾರ,ಸ್ವರ್ಣವಲ್ಲಿ ಶ್ರೀಗಳನ್ನು ಮುಂದಿರಿಸಿಕೊಂಡು ಆರ್.ಎಸ್.ಎಸ್.ನವರಿಂದ ಈ ರೀತಿ ಕೋಮು ಸೌಹಾರ್ದತೆಯನ್ನು ಕೆಣಕುವಂಥದ್ದು ನಡೆಯುತ್ತಿದೆ ಎನ್ನುವುದುಕೆಲವರ ಅಭಿಪ್ರಾಯ. ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು?
ಶ್ರೀಗಳು:ಆರ್.ಎಸ್.ಎಸ್.ನವರಿಗೂ,ಅಥವಾ ಸಂಘಪರಿವಾರದವರಿಗೂ ಈ ಭಗವದ್ಗೀತಾ ಅಭಿಯಾನಕ್ಕೂ ನೀವು ಅಂದುಕೊಂಡಂತೆ ಸಂಬಂಧ ಇಲ್ಲ.ನಾವು ಎಲ್ಲ ಕೆಲಸಗಳಲ್ಲಿಯೂ ಯಾರು ನಮಗೆ ಸಹಕಾರ ಕೊಡುತ್ತಾರೆಯೋ ಅವರ ಸಹಕಾರವನ್ನು ತೆಗೆದುಕೊಂಡು ಹೋಗುತ್ತಿರುತ್ತೇವೆ. ಅದು ಸಹಜ. ಕೆಲಸವಾಗುವದು ನಮಗೆ ಮುಖ್ಯ. ಆ ಹಿನ್ನಲೆಯಲ್ಲಿ ಕೆಲವುಕಡೆ ಸಂಘಪರಿವಾರದ ಕೆಲವು ಕಾರ್ಯಕರ್ತರು ವೈಯಕ್ತಿಕವಾಗಿ ಇದರಲ್ಲಿ ಭಾಗವಹಿಸಿ ಕೆಲಸ ಮಾಡಿದ್ದಾರೆ.ಕೇಸರೀಕರಣವಂತೂ ಅಲ್ಲವೇ ಅಲ್ಲ.ಯಾಕೆಂದರೆ ಮತಾಂತರ ಅಥವಾ ಬೇರೆ ರೀತಿಯ ಯಾವುದೇ ಆಮಿಷಗಳು ಇಲ್ಲಿ ಇಲ್ಲವೇ ಇಲ್ಲ. ಭಗವದ್ಗೀತೆಯಲ್ಲಿನ ಒಳ್ಳೆಯ ವಿಷಯಗಳನ್ನು ಗಮನಿಸಲು ನಾವು ಹೇಳುತ್ತೆವೆ.
ಬಹುತೇಕ ಮಾಧ್ಯಮಗಳು ಒಂದು ತಪ್ಪನ್ನು ಮಾಡುತ್ತಿವೆ. ಏನೆಂದರೆ ೧೪ ಮತ್ತು ೧೫ನೆ ಅಧ್ಯಾಯದಲ್ಲಿ, ವರ್ಣವ್ಯವಸ್ಥೆಯ ಬಗ್ಗೆ, ಬ್ರಹ್ಮಣ್ಯದ ಬಗ್ಗೆ ಉಲ್ಲೇಖ ಇದೆ ಎಂದು ಪ್ರಕಟಿಸುತ್ತಿವೆ. ಆದರೆ ಇವುಗಳಲ್ಲಿ ಈ ಬಗ್ಗೆ ಪ್ರಸ್ತಾಪ ಇಲ್ಲವೇ ಇಲ್ಲ. ಆದ್ದರಿಂದ ಕೇಸರೀಕರಣ,ಸಂಘಪರಿವಾರದ ಹಿನ್ನೆಲೆ ಮುಂತಾಗಿ ಆರೋಪ ಮಾಡುವವರಿಗೆ ಸಂಘಪರಿವಾರದ ಬಗ್ಗೆ ಆರ್.ಎಸ್.ಎಸ್. ನ ಬಗ್ಗೆ ಏನೋ ಒಂದು ಆಗ್ರಹವಿದೆ ಎನ್ನುವದನ್ನು ತೋರಿಸುತ್ತದೆ. ಭಗವದ್ಗೀತಾ ಅಭಿಯಾನ ಈ ಹಿನ್ನೆಲೆಯಲ್ಲಿ ಹೊರಟೇ ಇಲ್ಲ.
ಅಭಿಯಾನ ಯಾಕಾಗಿ ಹೊರಟಿದೆ? ಎನ್ನುವದಾದರೆ ಭಗವದ್ಗೀತೆಯನ್ನು ಪೂರ್ತಿಯಾಗಿ ಗುರುಮುಖದಲ್ಲಿ, ಭಾಷ್ಯಸಹಿತನಾಗಿ ಓದುವಂತಹ  ಅವಕಾಶ ಬಹಳ ವರ್ಷದ ಹಿಂದೆ ನಮಗೆ ಸಿಕ್ಕಿತು. ಅದನ್ನು ಓದಿದ ನಂತರ ಅದು ನಮಗೆ ಮೆಚ್ಚುಗೆಯ ಗ್ರಂಥವಾಯಿತು. ಈ ಗ್ರಂಥದ ಸವಿಯನ್ನು ಇನ್ನೂ ನಾಲ್ಕು ಜನರಿಗೆ ಹಂಚಬೆಕೆನ್ನುವ ಭಾವನೆ ಹುಟ್ಟಿತು. ಮತ್ತು ಈಗಿನ ಕಾಲದ ಪರಿಸ್ಥಿತಿಯನ್ನು ನೋದಿ ಭಗವದ್ಗೀತಾ ಅಭಿಯಾನವನ್ನು ಮಾಡಬೇಕೆನ್ನುವ ಪ್ರೇರಣೆ ಹುಟ್ಟಿತು. ಮನುಷ್ಯನ ಮಾನಸಿಕ ಪರಿಸ್ಥಿತಿ ಬಹಳ ಹಾಳಾಗಿದೆ.
ಅನೇಕ ಮನೋರೋಗಗಳಿಗೆ  ಒಳಗಾಗುತ್ತಿದ್ದಾನೆ,ಆತ್ಮಹತ್ಯೆ ಪ್ರಕರಣಗಳು, ಕುಟುಂಬ ಕಲಹಗಳು,ವಿವಾಹ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿರುವದು ಇದಕ್ಕೆ ಒಂದು ನಿದರ್ಶನ. ಅಂಕಿ-ಅಂಶಗಳನ್ನು ನೋಡಿದರೆ ಇವುಗಳು ಹೆಚ್ಚಾಗುತ್ತಿರುವುದು ಖಚಿತವಾಗಿ ಗೊತ್ತಗುತ್ತವೆ. ಒಳ್ಳೆಯ ವಿದ್ಯಾವಂತರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಯೋತ್ಪಾದಕರಾಗುತ್ತಿದ್ದಾರೆ. ಇವೆಲ್ಲವನ್ನು ನೋಡಿದಾಗ ನಾವು ಒಳ್ಳೆಯ ಮೌಲ್ಯವನ್ನು,ಜನಜೀವನಕ್ಕೆ ಅನುಕೂಲವಾಗುವ ಮಾರ್ಗದರ್ಶನಗಳನ್ನು ಜನರಿಗೆ ಕೊಡಬೇಕೆನ್ನುವ ಹಿನ್ನೆಲೆಯಲ್ಲಿ ಭಗವದ್ಗೀತಾ ಅಭಿಯಾನ ನಮ್ಮ ಸ್ವಂತ ಆಲೋಚನೆಯಲ್ಲಿ ಪ್ರಾರಂಭವಾಗಿದೆ. ಇದು ಅಹಂಕಾರದ ಮಾತಲ್ಲ. ಆದ್ದರಿಂದ ಯಾರೂ ಕೂಡಾ ಅಭಿಯಾನವನ್ನು ತಪ್ಪಾಗಿ ಅರ್ಥೈಸಬಾರದು ನಾವು ಎಲ್ಲರ ಸಹಕಾರವನ್ನೂ ಕೇಳುತ್ತೇವೆ. ಕೆಳಿದಾಗ ಯಾರು ಮುಂದೆ ಬರುತ್ತಾರೋ ಅವರನ್ನು ಉಪಯೋಗಿಸಿಕೊಂಡು ಕಾರ್ಯಕ್ರಮವನ್ನು ಮಾಡುತ್ತೆವೆ. ಆ ಸಂದರ್ಭದಲ್ಲಿ ಸಂಘಪರಿವಾರಕ್ಕೆ ಸಂಬಂದಿಸಿದ ಕಾರ್ಯಕರ್ತರು ನಮಗೆ ಸಹಕರಿಸಿದ್ದುಂಟು. ಆದರೆ ಬಹು ಮುಖ್ಯವಾಗಿ ನೆನಪಿಡಬೇಕಾದ ಸಂಗತಿಯೆಂದರೆ ಅಭಿಯಾನದುದ್ದಕ್ಕೂ ಕಾಂಗ್ರೆಸ್,ಜೆ.ಡಿ.ಎಸ್, ಬಿ.ಜೆ.ಪಿ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳ ಕಾರ್ಯಕರ್ತರೂ ಅಭಿಯಾನಕ್ಕೆ ಈ ತನಕ ಸಹಕರಿಸಿದ್ದಾರೆ. ಸಭಾ ಕಾರ್ಯಕ್ರಮಗಳಲ್ಲಿ  ಎಲ್ಲ ಪಕ್ಷದವರೂ, ಎಲ್ಲ ಸಮುದಾಯದವರೂ ಭಾಗವಹಿಸಿದ್ದಾರೆ
ಕರ್ಮವೀರ: ಸರಕಾರದ ಆರ್ಥಿಕ ನೆರವು ಗೀತಾಭಿಯಾನಕ್ಕೆ ಇದಯೆ?
ಶ್ರೀಗಳು: ಸರಕಾರದ ಆರ್ಥಿಕ ನೆರವನ್ನು ನಾವು ಒತ್ತಾಯಿಸಿ ಕೇಳಲೂ ಇಲ್ಲ. ಅವರು ಕೊಡಲೂ ಇಲ್ಲ. ಸರಕಾರಕ್ಕೂ ಈ ಅಭಿಯಾನಕ್ಕೂ ಇರುವ ಸಂಬಂಧ ಎನೆಂದರೆ- ಅಭಿಯಾನವನ್ನು ಶಾಲೆಗಳಲ್ಲಿ ನೆಡೆಸುವದಕ್ಕೆ ಅನುಮತಿಯನ್ನು ಕೊಡಿ  ಎಂದು ಕೇಳಿದ್ದೇವೆ. ಅವರು ಯಾರುಗೆ ಒಪ್ಪಿಗೆ ಇದಯೋ ಅವರು ನೆಡೆಸಬಹುದು ಎಂದು ಅನುಮತಿಯನ್ನು ಕೊಟ್ಟಿದ್ದಾರೆ. ಈ ಒಂದು ಆದೇಶ ಬಿಟ್ಟರೆ ಸರಕಾರಕ್ಕೂ ಈ ಅಭಿಯಾನಕ್ಕೂ ಯಾವುದೇ ಸಂಬಂದವಿಲ್ಲ. ಈಗ ಈ ಕೋಲಾರದ ಘಟನೆಯ ನಂತರ ನಮಗೆ ರಕ್ಷಣೆ ಕೊಡಿ ಎಂದು ಕೇಳಿದ್ದುಂಟು. ಸರಕಾರದಿಂದ ಆರ್ಥಿಕ ಸಹಕಾರ ಇದೆ ಎಂದು ಕಲ್ಪಿಸಿಕೊಳ್ಳುವದನ್ನು ಕೇಳಿದರೆ ಬಹಳ ಬೇಸರ ಆಗುತ್ತಿದೆ.
ಕರ್ಮವೀರ: ದೇಶದಲ್ಲಿ ಎಷ್ಟೋಂದು ಭಯೋತ್ಪಾದನಾ ಚಟುವಟಿಕೆಗಳು ನೆಡೆಯುತ್ತಿವೆ. ಅದರ ಬಗ್ಗೆ ವಿಚಾರವಾದಿಗಳು ಚಕಾರ ಎತ್ತಲಿಲ್ಲ. ಈ ಭಗವದ್ಗೀತೆಯ ಬಗ್ಗೆ ಆಕ್ಷೇಪಿಸುತ್ತಾ ಇದ್ದಾರೆ ಈ ಕುರಿತು ತಮ್ಮ ಅನಿಸಿಕೆ ಏನು?
ಶ್ರೀಗಳು: ಇದಕ್ಕೆ ನಮ್ಮದೊಂದು ಪ್ರಶ್ನೆ ಇದೆ.ಭಗವದ್ಗೀತೆಯನ್ನು ಮಕ್ಕಳಿಗೆ ಹೇಳಿ ಕೊಡುವದು ಬೇಡ ಎಂದಾದರೆ ಹೆಚ್ಚುತ್ತಿರುವ ಮಾನಸಿಕ ದೌರ್ಬಲ್ಯ,ಆತ್ಮಹತ್ಯೆ ಪ್ರಕರಣಗಳು, ಮಾನಸಿಕರೋಗಗಳು, ಮಾನಸಿಕತೆಯ ಮೂಲದಿಂದ ಬರುತ್ತಿರುವ ರೋಗಗಳು ಮತ್ತು ಸುಶಿಕ್ಷಿತರು ಭಯೋತ್ಪಾದಕರಾಗುತ್ತಿರುವದು ಹೆಚ್ಚುತ್ತಲಿದೆ. ಇದಕ್ಕೆ ಏನು ಪರಿಹಾರ ಕೊಡುತ್ತೀರಿ? ಇದು ನಮ್ಮ ಪ್ರಶ್ನೆ. ನೈತಿಕ ಶಿಕ್ಷಣದ ಮೂಲಕ ಪರಿಹಾರ ಕಂಡುಕೊಳ್ಳುತ್ತೇವೆ ಎನ್ನಬಹುದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಸ್ವಲ್ಪಮಟ್ಟಿಗೆ ಇದೆ. ಆದರೆ ಅದಕ್ಕೆ ತಳಪಾಯವೇ ಇಲ್ಲ. ಆಧ್ಯಾತ್ಮಿಕತೆ ಇಲ್ಲದ ನೈತಿಕತೆಯನ್ನು ಕೊಟ್ಟರೆ ಅದು ನಿಲ್ಲುವದಿಲ್ಲ.
"ನೋಡು ದೇವರಿದ್ದಾನೆ! ತಪ್ಪು ಮಾಡಿದರೆ ಪಾಪ ಬರುತ್ತದೆ!" ಈ ರೀತಿಯ ಒಳ್ಳೆಯ ನಂಬಿಕೆಗಳ ತಳಹದಿಯ ಮೇಲೆ ಕೊಡುವ ನೈತಿಕತೆನಿಲ್ಲುತ್ತದೆಯೇ ವಿನಃ ಅದಿಲ್ಲದೆ ನೈತಿಕತೆಯ ಪಾಠವನ್ನು ಎಷ್ಟೇ ಹೇಳಿದರೂ ನೈತಿಕತೆ ನಿಲ್ಲುವದಿಲ್ಲ. ಈ ಹಿನ್ನಲೆಯಲ್ಲಿ ಮುಂದಿಡುವ ಪ್ರಶ್ನೆ ಎನೆಂದರೆ- ಭಗವದ್ಗೀತೆ ಶಿಕ್ಷಣದಲ್ಲಿ ಬೇಡ ಎಂದರೆ ಹೆಚ್ಚುತ್ತಿರುವ ಮಾನಸಿಕರೋಗಗಳನ್ನು ಕಡಿಮೆ ಮಾಡಲಿಕ್ಕೆ ಏನು ಉಪಾಯ ಹೇಳುತ್ತೀರಿ? ಹೆಚ್ಚುತ್ತಿರುವ ಭಯೋತ್ಪಾದನೆಯಲ್ಲಿ ನಮ್ಮ ಮಕ್ಕಳು ಜೋಡಣೆಯಾಗುತ್ತಿದ್ದಾರೆ ಇದಕ್ಕೆ ಏನು ಪರಿಹಾರ ಒದಗಿಸುತ್ತೀರಿ?
ಕರ್ಮವೀರ: ಭಗವದ್ಗೀತೆಯನ್ನು ಸಾಮಾಜಿಕ ವಿಜ್ಞಾನ ಎನ್ನಬಹುದೇ?
ಶ್ರೀಗಳು: ಹೇಳಬಹುದು. ಆದರೆ ಬರೀ ಸಾಮಾಜಿಕ ಒಂದೇ ಅಲ್ಲ. ಆಧ್ಯಾತ್ಮಿಕ ನೈತಿಕ ಮೌಲ್ಯಗಳೂ ಇದ್ದಾವೆ. ಅದರ ಆಧಾರದ ಮೇಲೆ ಸಮಾಜವನ್ನು ನಿರ್ಮಾಣ ಮಾಡುವ ದೃಷ್ಟಿಯನ್ನು ಇಟ್ಟುಕೊಂಡರೆ ಸಾಮಾಜಿಕ ವಿಜ್ಞಾನ ಎಂದು ಹೇಳಬಹುದು.

                                                     (ಕರ್ಮವೀರ julai 31 ವಾರಪತ್ರಿಕೆಯಿಂದ ಕದ್ದಿದ್ದು)

Tuesday 2 August 2011

೧. ಹೊಟ್ಟೆಗೆ ಹಿಟ್ಟಿಲ್ಲ ಅಂದರೂ ಕೈಗೊಂದು ಮೊಬೈಲ್
೨. ಯಾರದೋ ಮೊಬೈಲ್ ಗಂಟೆಗಟ್ಟಲೇ ಹರಟೆ
೩. ಮಾತು ಬೆಳ್ಳಿ ಎಸ್.ಎಮ್.ಎಸ್. ಬಂಗಾರ
೪. ಮಿಸ್ಡ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿದರೂ ಸಿಗೋಲ್ಲ
೫. ಪಾಪಿ ಬಿ.ಎಸ್.ಎನ್.ಎಲ್ ಟವರ್ ಹತ್ತಿದ್ರೂ ಚೋಟುದ್ದ ನೆಟ್ವರ್ಕು
೬. ಕಂಡವರ ಮೊಬೈಲ್ ನಲ್ಲಿ ಕಾಲ್ ಮಾಡುವವನೇ ಜಾಣ
೭. ಕಾಲ್ ಮಾಡುವವನು ಕುರಿ, ಎಸ್.ಎಮ್.ಎಸ್ ಮಾಡುವವನು ನರಿ
೮. ಅಪ್ಪನಿಗೆ ಕರೆನ್ಸಿ ಹಾಕಿಸಲು ಬೇಕು ವರುಷ, ಮಗಳಿಗೆ ಮುಗಿಸಲು ಸಾಕು ನಿಮಿಷ.
೯. ಮಾತು ಮನೆ ಕೆಡಿಸಿತು, ಎಸ್.ಎಮ್.ಎಸ್ ತಲೆ ಕೆಡಿಸಿತು
೧೦. ಕೂತು ಮೊಬೈಲ್ ನಲ್ಲಿ ಹರಟೆ ಹೊಡೆದರೆ, ಕೋಟಿ ಕರೆನ್ಸಿ ಇದ್ದರೂ ಸಾಲದು
೧೧. ರಿಲಯನ್ಸ್ ಗೊಂದು ಕಾಲ ನೋಕಿಯಾಗೊಂದು ಕಾಲ
೧೨. ಆಪ್ಶನ್ ನೋಡಿ ಮೊಬೈಲ್ ಖರೀದಿ ಮಾಡು
೧೩. ಮೊಬೈಲ್ ನಿಂದ ಹುಡುಗಿ ಕೆಟ್ಟಳು, ಗರ್ಲ್ ಫ್ರೆಂಡ್ ಗಳಿಂದ ಹುಡುಗ ಕೆಟ್ಟ.
೧೪. ಹುಡುಗಿ ಚಿಕ್ಕದಾದರೂ ಮೊಬೈಲ್ ದೊಡ್ಡದು.
೧೫. ಮೊಬೈಲ್ ಇರುವವನ್ ಆರ್ಭಟ ಕರೆನ್ಸಿ ಇರುವವರೆಗ

Saturday 30 July 2011

ಕದ್ದ ಜೊಕು ಜೊಕಾಲಿ

1)ರಾಂ ಭಟ್ರು ಮನೆ ಮಾಣಿಗೆ FM ಕೇಳ ಚಟ. ರೇಡಿಯೋ ತಗಂಡು Toiletಗೆ ಹೋಗಿ ಬಂದ.
ಅವ್ನ ಹೆಂಡ್ತಿ : ಹಾಡು ಚನ್ನಾಗಿತ್ತಾ?
ಮಾಣಿ : ಬೋ...ಮಕ್ಕಳು ಜನ ಗಣ ಮನ ಹಾಕಿದ. ಯಲ್ಲಾ ನಿತ್ಕಂಡೇ ಮಾಡಕ್ಕಾತು.! ದರಿದ್ರದವು
2)ತವರು ಮನೆಗೆ ಹೊಪಕಾದ್ರೆ ಹೆಂಡತಿ ಗಂಡನಿಗೆ ಅಡುಗೆ ಮಾಡ ವಿಧಾನ ಹೇಳಿಕೊಟ್ತು,
ಎಲ್ಲಾ ತಯಾರಿಸಿ ಗಂಡ ಹೆಂಡತಿಗೆ ಫೋನ್ ಮಾಡಿ ಕೇಳಿದ "ತಲೆ ಕೂದ್ಲು ಹಾಕದು ಯಾವಾಗ್ಲೆ..! "
3)ಬೆಕ್ಕು : ನಿನಗೆ ಎಷ್ಟು ವರ್ಷ?
ಆನೆ : ಐದು ವರ್ಷ.
ಬೆಕ್ಕು : ಐದು ವರ್ಷನಾ? ಮತ್ತೆ ನಿನ್ನ ದೇಹ ಇಷ್ಟು ದೊಡ್ಡದಾಗಿದೆ?
ಆನೆ : ನಾನು ಕಾಂಪ್ಲಾನ್ ಬಾಯ್! ನಿನಗೆ?
ಬೆಕ್ಕು : ನನಗೆ 30 ವರ್ಷ.
ಆನೆ : 30 ವರ್ಷನಾ? ಮತ್ತೆ ಯಾಕೆ ನಿನ್ನ ದೇಹ ಇಷ್ಟು ಚಿಕ್ಕದಾಗಿದೆ?
ಬೆಕ್ಕು : ನಾನು ಸಂತೂರ್ ಗರ್ಲ್!

4)ಗುಂಡ : ಸಾರ್ ನನ್ನ ಚೆಕ್ ಬುಕ್ ಕಳೆದು ಹೋಗಿದೆ.
ಬ್ಯಾಂಕ್ ಮೇನೇಜರ್ : ಹುಷಾರಪ್ಪಾ.. ಯಾರಾದ್ರೂ ನಿನ್ನ ಸೈನ್ ಫೋರ್ಜರಿ ಮಾಡಿಬಿಟ್ಟಾರು...
ಗುಂಡ : ಏನ್ ಸಾರ್, ನನ್ನನೇನು ಅಷ್ಟು ದಡ್ಡಾ ಅನ್ಕೊಂಡ್ರಾ.. ಎಲ್ಲಾ ಚೆಕ್ ಗೆ ಆಗ್ಲೇ ಸೈನ್ ಮಾಡಿದ್ದೇನೆ!

5)ಗುಂಡ ತಿಂಡಿ ತಿನ್ನಲು ದರ್ಶಿನಿಗೆ ಹೋದ...
ಗುಂಡ : ಯಾಕೆ ನೀವು ಪ್ರತೀ ಮಂಗಳವಾರ ನಿಮ್ಮ ಹೊಟೇಲ್ ಗೆ ರಜಾ ಕೊಡ್ತೀರಾ?
ಹೋಟೆಲ್ ಮಾಲೀಕ : ಯಾಕೆಂದರೆ.. ಅವತ್ತೊಂದಿನ ಮಾತ್ರ ಎಲ್ಲಾ ಪಾತ್ರೆಗಳನ್ನು ತೊಳಿತೀವಿ.

6)ನೀರಿನ ಸಾಗರವನ್ನು ದಾಟಲು 'ತೆಪ್ಪ' ಇರಬೇಕು...
ವಾಹ್ ವಾಹ್ ವಾಹ್...
ನೀರಿನ ಸಾಗರವನ್ನು ದಾಟಲು 'ತೆಪ್ಪ' ಇರಬೇಕು...
ಸಂಸಾರ ಸಾಗರವನ್ನು ದಾಟಲು ತೆಪ್ಪಗಿರಬೇಕು!
7)ರಾಜಕಾರಿಣಿಯಾಗಿ ಬದಲಾದ ಗುಂಡನ ಮಡದಿ ಸತತವಾಗಿ ಐದನೇ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಈ ಬಾರಿಯಾದರೂ ಗಂಡು ಮಗುವಿನ ತಂದೆಯಾಗಿ ಮಗನನ್ನು ಭವಿಷ್ಯದ ರಾಜಕಾರಿಣಿಯಾಗಿ ರೂಪಿಸಬೇಕೆನ್ನುವ ಗುಂಡನಿಗೆ ಭಾರೀ ನಿರಾಶೆಯಾಗುತ್ತದೆ. ಈ ಬಾರಿಯೂ ಹೆಣ್ಣು ಮಗುವಿನ ತಂದೆಯಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ...

ಗುಂಡ : ಇದು ವಿರೋಧ ಪಕ್ಷದವರ ವ್ಯವಸ್ಥಿತ ಪಿತೂರಿ. ನನ್ನ ಮದುವೆಯಾದಾಗಿನಿಂದ ವಿರೋಧ ಪಕ್ಷದವರು ನೆಮ್ಮದಿಯಿಂದ ಕೆಲಸ ಮಾಡಲು ಬಿಡಲಿಲ್ಲ. ಹುಟ್ಟು ಹೋರಾಟಗಾರನಾದ ನಾನು ಸುಮ್ಮನೆ ಕೂರುವವನಲ್ಲ, ಮತ್ತೆ ಮಗುದೊಮ್ಮೆ ಪ್ರಯತ್ನಿಸುತ್ತೇನೆ. ಪಕ್ಷದ ವರಿಷ್ಠರ ಬಳಿ ಈ ವಿಷಯದ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ. ಅಗತ್ಯ ಬಿದ್ದರೆ ರಾಷ್ಟ್ರಪತಿ ಬಳಿ ನಿಯೋಗ ಕರೆದೊಯ್ಯುತ್ತೇನೆ. ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರು ಧರಣಿ ನಡೆಸಲು ಮುಂದಾಗಿದ್ದಾರೆ. ಅಗತ್ಯ ಬಿದ್ದರೆ ಬಂದ್ ಗೆ ಕರೆ ನೀಡಲು ಚಿಂತಿಸಲಾಗುತ್ತಿದೆ.

ವಿರೋಧಪಕ್ಷದ ಸದಸ್ಯ : ಗುಂಡವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೂ ನಾವು ಸಿದ್ದರಿದ್ದೇವೆ. ಈ ಸಂಬಂಧ ವಿಡಿಯೋ ಸಾಕ್ಷಿ ಏನಾದರೂ ಇದ್ದರೆ ಬಹಿರಂಗ ಪಡಿಸಲಿ. ಇವರ ಹೇಳಿಕೆ ನಿಜವಾದರೆ ಮತ್ತು ರುಜುವಾತು ಪಡಿಸಿದರೆ ಪಕ್ಷದ ಪರಿಹಾರ ನಿಧಿಯಿಂದ ಹೆರಿಗೆ ಖರ್ಚನ್ನು ನಾವೇ ಭರಿಸುತ್ತೇವೆ.

ಗುಂಡ : ವಿಡಿಯೋ ಸಾಕ್ಷಿ ಬಹಿರಂಗ ಪಡಿಸಲು ಇದು ನಿತ್ಯಾನಂದನ ಹಗರಣವಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಗಂಡಸರು ನಿಮ್ಮಲ್ಲಿಲ್ಲವೇ?

ವಿರೋಧಪಕ್ಷದ ಸದಸ್ಯ : ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ತಿಂಗಳು ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಕೂಲಂಕುಷವಾಗಿ ಸದಸ್ಯರ ಬಳಿ ಈ ಬಗ್ಗೆ ಚರ್ಚಿಸಿ ಹೇಳಿಕೆ ನೀಡಲಾಗುವುದು. ತಪ್ಪಿತಸ್ಥರಿದ್ದರೆ ಮುಲಾಜಿಲ್ಲದೆ ಅವರ ಹೆಸರನ್ನು ಬಹಿರಂಗಪಡಿಸುತ್ತೇವೆ.

8)ಪ್ರಪಂಚದ 3 ಅತಿಶೀಘ್ರ ಕಮ್ಯೂನಿಕೇಶನ್ ಯಾವುದೆಂದರೆ -
ಟೆಲಿ - ಫೋನ್
ಟೆಲಿ - ವಿಷನ್
ಟೆಲ್ ಟು ವುಮೆನ್!

9)ಮಗ : ಅಮ್ಮಾ ಸ್ಕೂಲ್ ನಲ್ಲಿ ನನಗೆ ತುಂಬಾ ಹೊಡಿತಾರಮ್ಮ.
ತಾಯಿ : ಯಾಕೋ, ಸ್ಕೂಲ್ ನಲ್ಲಿ ತುಂಬಾ ಗಲಾಟೆ ಮಾಡುತ್ತೀಯಾ?
ಮಗ : ಇಲ್ಲಾಮ್ಮಾ. ನನ್ ಪಾಡಿಗೆ ಮಲಗಿದರೂ ಎಬ್ಬಿಸಿ ಹೊಡಿತಾರಮ್ಮಾ!
10)ವೈದ್ಯರೊಬ್ಬರು ತನ್ನ ಹೊಸ ಆಸ್ಪತ್ರೆಗೆ ಜಾಹೀರಾತು ನೀಡಲು ಒಂದು ಒಳ್ಳೆ ಪಂಚ್ ಡೈಲಾಗ್ ಹೇಳಿ ಎಂದು ನರ್ಸ್ ಗಳಲ್ಲಿ ಸಲಹೆ ಕೇಳುತ್ತಾರೆ.

ನರ್ಸ್ ಗಳು ವಿವಿಧ ಸಲಹೆ ನೀಡುತ್ತಾರೆ. ಆದರೆ ಒಂದು ನರ್ಸ್ ನೀಡಿದ ಪಂಚ್ ಡೈಲಾಗ್ ಸಲಹೆಯಿಂದ ಆಕೆಯ ಕೆಲಸಕ್ಕೆ ಸಂಚಕಾರ ಬರುತ್ತದೆ. ಆಕೆ ಸಲಹೆ ನೀಡಿದ ಪಂಚ್ ಡೈಲಾಗ್ ಸಲಹೆ ಏನು ಗೊತ್ತೇ?

"ಕರ್ಕೊಂಡು ಬನ್ನಿ... ಹೊತ್ಕೊಂಡು ಹೋಗೀ.. "
11)ಬೆಟ್ಟದ ತುದಿಯಿಂದ ಗುಂಡ ಒಂದು ಹುಡುಗಿಯನ್ನು ತಳ್ಳಿ ಸಾಯಿಸುತ್ತಾನೆ.
ಜಡ್ಜ್ : ಯಾಕೋ ಆ ಹುಡುಗಿಯನ್ನು ಸಾಯಿಸಿದೆ?
ಗುಂಡ: ನಾನು ಅವಳ ಹೆಸರನ್ನು ಕೇಳಿದೆ ಸಾರ್, ಅವಳು ಪುಷ್ಪಾಂತ (ಪುಷ್ ಪಾ) ಹೇಳಿದಳು. ಅದಕ್ಕೆ ತಳ್ಳಿದೆ.
ಜಡ್ಜ್: ಅಯ್ಯೋ ಪಾಪಿ..


12)ಪಾರ್ಕ್ ನಲ್ಲಿ ಇಬ್ಬರು ಗೆಳತಿಯರು ಚರ್ಚಿಸುತ್ತಿದರು
ಒಬ್ಬಾಕೆ: ಅಲ್ಲಿ ಕೂತಿದ್ದಾನೆ ನೋಡು, ಅವನು ಬಹಳ ಶ್ರೀಮಂತ.
ಇನ್ನೊಬ್ಬಾಕೆ: ಅದೇಗೆ ಹೇಳ್ತೀಯಾ.. ನಿನಗೆ ಹೇಗೆ ಗೊತ್ತು?
ಒಬ್ಬಾಕೆ: ಅವನ ಕಡೆಯಿಂದ ಈರುಳ್ಳಿ ವಾಸನೆ ಬರುತ್ತಿದೆ..


13)ಗುಂಡ: ಸಂತೋಷದ ಸುದ್ದಿ, 2012 ಕ್ಕೆ ಪ್ರಳಯ ಆಗೋಲ್ಲಾ.
ತಿಮ್ಮ: ಅದೇಗೆ, ಏನು ಸಾಕ್ಷಿ?
ಗುಂಡ: ನಾನು ಮೊನ್ನೆ ತಗೊಂಡ ಟೊಮ್ಯಾಟೋ ಸಾಸ್ ಸಾಕ್ಷಿ, ಅದರಲ್ಲಿ ಎಕ್ಷ್ಪೈರಿ ಡೇಟ್ 2013 ಅಂತಾ ಇದೆ.


14)ಹುಡುಗ, ಹುಡುಗಿ ಪಾರ್ಕ್ ನಲ್ಲಿ ಕೂತಿದ್ದರು. ಮೆತ್ತಗೆ ಹುಡುಗ ಹುಡುಗಿಯ ಮೈ ಟಚ್ ಮಾಡುತ್ತಾನೆ
ಹುಡುಗಿ: ನನ್ನ ಮೈ ಮುಟ್ಟ ಬೇಡ, ಅದೆಲ್ಲಾ ಏನಿದ್ದರೂ ಮದುವೆಯಾದ ಮೇಲೆ
ಹುಡುಗ: ಓಕೆ, ಹಾಗಾದ್ರೆ ನಿನ್ನ ಮದುವೆ ಆದ ಮೇಲೆ ಕರೀ..
 
15)ಪ್ರಸಿದ್ಧ ಲೇಖಕ ಮೆಚ್ಚಿ ಮದುವೆಯಾದ ಮಡದಿಗೆ ಸೋಡಾಚೀಟಿ ಕೊಟ್ಟು ಡೈವೋರ್ಸ್ ಪಡೆದು ಬಿಟ್ಟ. ಅವನ ಬೆನ್ನು ಬಿದ್ದ ಪತ್ರಕರ್ತರು ಕೇಳಿದ ಪ್ರಶ್ನೆಗೆ "ಸಾರ್, ವಿಚ್ಛೇದನ ಪಡೆಯಲು ಮೂಲ ಕಾರಣ ಏನು?" ಲೇಖಕ ಅವನು ಕೊಟ್ಟ ಕಡೆಯ ಉತ್ತರ ಹೀಗಿತ್ತು" ಮದುವೆ".
16)ಮಗ : ಅಪ್ಪಾ.. ನಾಳೆ ನನ್ನ ಗರ್ಲ್ ಫ್ರೆಂಡ್ ಬರ್ತಡೇ. ಏನು ಗಿಫ್ಟ್ ಕೊಡ್ಲಪ್ಪಾ?
ತಂದೆ : ನೋಡೋಕೆ ಹೇಗಿದಾಳೆ?
ಮಗ : ಸಖತ್ತಾಗಿದ್ದಾಳೆ.
ತಂದೆ : ಹಾಗಾದರೆ ನನ್ನ ಮೊಬೈಲ್ ನಂಬರ್ ಕೊಡು!


17)ಒಂದು ಹುಡುಗಿ ತನ್ನ ತೂಕ ಚೆಕ್ ಮಾಡ್ತಿದ್ಳು - 58 ಕೆಜಿ
ಚಪ್ಪಲಿ ತೆಗೆದು ಚೆಕ್ ಮಾಡಿದಾಗ - 56 ಕೆಜಿ
ಜರ್ಕಿನ್ ತೆಗೆದು ಚೆಕ್ ಮಾಡಿದಾಗ - 53 ಕೆಜಿ
ದುಪಟ್ಟಾ ತೆಗೆದು ಚೆಕ್ ಮಾಡಿದಾಗ - 52 ಕೆಜಿ
ಅಷ್ಟರಲ್ಲಿ ಅವಳ ಒಂದು ರುಪಾಯಿ ನಾಣ್ಯಗಳು ಖಾಲಿ ಆಯಿತು..
ಹಿಂದೆ ವೈಟ್ ಚೆಕ್ ಮಾಡೋಕೆ ನಿಂತಿದ್ದ ತರ್ಲೆ ಹುಡುಗನೊಬ್ಬ ''ನೀನು ಮುಂದುವರಿಸು ನನ್ನ ಬಳಿ ಬೇಕಾದಷ್ಟು ಕಾಯಿನ್ ಗಳಿವೆ!"


18)ಟೀಚರ್ : ಮಕ್ಕಳೇ ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಏನಾದರೂ ಡೌಟ್ ಇದ್ದಾರೆ ಕೇಳಿ..
ಗುಂಡ : ಮಿಸ್.. ಎಕ್ಸಾಮ್ ಪೇಪರ್ ಎಲ್ಲಿ ಪ್ರಿಂಟ್ ಆಗುತ್ತೆ?


19)ಗುಂಡ : ನಾನು ಒಂದು ದಿನ ಪೇಪರ್ ನಲ್ಲಿ ಓದಿದ್ದೆ.. ಕುಡಿಯೋದು ಜೀವಕ್ಕೆ ಹಾನಿಕರಯೆಂದು .. ಆವತ್ತಿನಿಂದ ಬಿಟ್ ಬಿಟ್ಟೆ..
ತಿಮ್ಮ : ಏನು ಬಿಟ್ ಬಿಟ್ಬಿಟ್ಟೆ?
ಗುಂಡ : ಪೇಪರ್ ಓದೋದನ್ನಾ!


20)ಜಗತ್ತಿನಲ್ಲಿ ಲಕ್ಷಾಂತರ ಮಂದಿ ಪ್ರೇಮ ಪತ್ರ ಬರೆಯುತ್ತಾರೆ..ಆದರೆ ಹೆಚ್ಚಿನವರು ಮೊದಲ ಪ್ರೇಮಪತ್ರವನ್ನು ನನಗೆ ಕಳುಹಿಸುತ್ತಾರೆ..
ನಾನು ಯಾರಿರಬಹುದು... ಊಹಿಸಿ....
...
....
ಡಸ್ಟ್ ಬಿನ್!
21)ಗುಂಡನ ಪತ್ನಿ ಗುಂಡಿ : ಈ ವಾರ ಫುಲ್ ಸಿನಿಮಾಗೆ ಹೋಗೋಣಾ.. ಬರುವ ವಾರ ಫುಲ್ ಶಾಪಿಂಗ್ ಮಾಡೋಣ..
ಗುಂಡ : ಅದರ ಮುಂದಿನ ವಾರ ಫುಲ್ ದೇವಸ್ಥಾನಕ್ಕೆ ಹೋಗೋಣಾ.
ಗುಂಡಿ : ಯಾಕೆ?
ಗುಂಡ : ಭಿಕ್ಷೆ ಬೇಡೋಕೆ!

22)ಗುಂಡ ಫೋಟೋ ತೆಗ್ಸೋಕೆ ಸ್ಟುಡಿಯೋಗೆ ಹೋದ..
ಗುಂಡ : ಸರ್ ನಿಮ್ಮಲ್ಲಿ.. ಪಾಸ್ಪೋರ್ಟ್ ಸೈಜ್ ಫೋಟೋ ನಲ್ಲಿ ಚಪ್ಪಲಿ ತನಕ ಫೋಟೋ ತೆಗೆಯೋಕಾಗುತ್ತಾ?
ಅಂಗಡಿ ಮಾಲಿಕ : ಬರುತ್ತೆ, ಆದ್ರೆ ನೀವು ಚಪ್ಪಲಿ ತಲೆಮೇಲೆ ಇಟ್ಕೊಂಡ್ರೆ ಮಾತ್ರಾ!

23)ಗುಂಡ : ನೋಡೋ ತಿಮ್ಮ, ಆ ಶಿವಣ್ಣನಿಗೆ ಎಷ್ಟು ಹೇಳಿದ್ರೂ ಇಲ್ಲ, ನಮ್ಮ ದೇಶ ಹಿಂದೂಸ್ಥಾನ್ ಬಿಟ್ಟು ಅಮೇರಿಕಾದಲ್ಲಿ ಸೆಟ್ಲ್ ಆಗುತ್ತಾನಂತೆ ಕಣೋ...
ತಿಮ್ಮ : ಹೌದಾ, ಅವನಿಗೆ ಹೋಗೋ ಮುಂಚೆ ಸರಿಯಾದ ಅಡ್ಡ ಹೆಸ್ರು ಇಟ್ಟು ಕಳುಹಿಸಬೇಕು. ಏನೂಂತಾ ಇಡೋಣ ಹೇಳು?
ಗುಂಡ : 'ಹಿಂದೂಸ್ಥಾನ್ ಲೀವರ್' ಅಂತ ಇಟ್ಟರೆ?

24)ಗುಂಡ : ಒಂದು ತಿಂಗಳ ನಂತರ ನಾನು ವರದಕ್ಷಿಣೆ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇನೆ.
ತಿಮ್ಮ : ಒಂದು ತಿಂಗಳು ಬಿಟ್ಟು ಯಾಕೆ? ಇಂದಿನಿಂದಲೇ ಶುರು ಮಾಡು.
ಗುಂಡ : ಯಾಕೆಂದರೆ, ಈ ತಿಂಗಳು ನನ್ನ ಮತ್ತು ಅದಾದ ಹತ್ತು ದಿನದಲ್ಲಿ ನನ್ನ ಸಹೋದರನ ಮದುವೆ ಇದೆ.
 
 
 

  • 25)
    ಮಾಣಿ ಕೂಸಿಗೆ : ನೀ ಖಾಲಿ ಹೊಟ್ಟೆಲಿ ಎಷ್ಟು ಸೇಬು ತಿಂತೆ?
    ಕೂಸು: 4 ತಿನ್ಲಕ್ಕು .
    ಮಾಣಿ : ಹಾ ಹ್ಹಾ .. ಇಲ್ಲೆ. ನೀ ಒಂದು ತಿಂದಮೇಲೆ ಹೊಟ್ಟೆ ಖಾಲಿ ಇರ್ತಿಲ್ಲೆ .. :) so ಖಾಲಿ ಹೊಟ್ಟೆಲಿ ಒಂದೇ ತಿನ್ಲಕ್ಕು.
    ಕೂಸು : ಹೇ ಮಸ್ತ್ ಇದ್ದಲೋ ಜೋಕು . ತಡೆ ನನ್ ಫ್ರೆಂಡ್ ಗೆ ಹೇಳ್ತೆ.
    ----------------------------------------------------
    ಕೂಸು ಇನ್ನೊಂದ್ ಕೂಸಿಗೆ
    ಕೂಸು 1 : ನೀ ಖಾಲಿ ಹೊಟ್ಟೆಲಿ ಎಷ್ಟು ಸೇಬು ತಿಂತೆ?
    ಕೂಸು 2 : 6 ತಿಂತೆ .
    ಕೂಸು 1 : ಥೋ.. ನೀ 4 ಹೇಳಿದಿದ್ರೆ ಎಷ್ಟ್ ಚೊಲೋ ಜೋಕ್ ಹೇಳ್ತಿದ್ದೆ ಗೊತ್ತಿದ್ದಾ.. ?? !!! :P
             26)ಆಪರೇಷನ್ ಕಂಡು ಪ್ರತಿಪಕ್ಷ  
              ಪರೇಷಾನ್ ಆಗಿದೆ;
              ರೇಷನ್  ಸಿಗದೆ ಬಡಜನತೆ
             ಷನ್‌ಖ ಊದುತ್ತಿದೆ;
             ಷನ್‌ಭೋ ಶಂಕರ
              ಕೇಎಸ್ಸೀಶ್ವರ
              ಎಂಥ ಗತಿ ಬಂತೋ
             ಯಡಿಯೂರ!
    27)ಕೂಸು: ಏ ನೀ ಎಂತಾ ಮಾಡ್ತ್ಯ?
    ಮಾಣಿ: ನಾ '' ಟೈಮ್ಸ್ ಆಫ್ ಇಂಡಿಯಾ'' ದಲ್ಲಿ ವರ್ಕ್ ಮಾಡ್ತಿದ್ದಿ, ಈಗ ಬಿಟ್ಟಿಗಿದ್ನೆ...
    ಕೂಸು: ಅಯ್ಯೋ ದೇವ್ರೆ, ಮಳ್ ಗೆಟ್ಟವ್ನೇಯಾ ನೀನು, ಎಂತಕ್ಕೆ ಬಿಟ್ಯಾ ಜಾಬ್ ನಾ??!
    ಮಾಣಿ:ಹೋಗೆ ಮಳ್ಳು ಬೆಳ್ಗೆ ಬೆಳ್ಗೆ ಎದ್ದು ಆ ಪೇಪರ್ ಹಾಕ ಕೆಲ್ಸ ಯಾರಿಗೆ ಬೇಕೇ ಮಾರಾಯ್ತಿ..........??!!!;);)
    28)ಮಗ : ಅಪ್ಪಾ, ಏನೂ ಕೆಲಸ ಮಾಡದೆ ದುಡಿಮೆ ಮಾಡೋ ಉದ್ಯೋಗ ಯಾವುದಾದ್ರೂ ಇದ್ರೆ ಹೇಳಪ್ಪ ?

    ಅಪ್ಪ : ನಂಗೊತ್ತಿಲ್ಲ ಮಗನೇ, ಕೆಲಸವನ್ನೇ ಮಾಡದೆ ಹಣ ಸಿಗೋಕೆ ಹೇಗೆ ಸಾಧ್ಯ ?

    ಮಗ : ಹಾಗಲ್ಲಪ್ಪ, ನನಗೆ ಕೆಲಸ ಇರಬಾರದು. ಬೇರೆಯವರೆಲ್ಲಾ ಅವರವರ ಕೆಲಸ ಮಾಡಿಕೊಂಡು ಹೋಗ್ತಾ ಇರಬೇಕು. ನಮಗೆ ಹಣ ಬರ್ತಾ ಇರಬೇಕು.
    ...
    ಅಪ್ಪ : ಹಾಗಿದ್ದರೆ ಒಂದು ’ಸುಲಭ್ ಶೌಚಾಲಯ’ ಶುರು ಮಾಡು !!!
     

Saturday 25 June 2011

ಆಧುನಿಕ ಸ್ವ ಘೊಶಿತವಿಚಾರವಾದಿಗಳಿಗೊಂದು ಪುಟ್ಟ ಸಲಹೆ

                  ಆಧುನಿಕ ಸ್ವ ಘೊಶಿತವಿಚಾರವಾದಿಗಳಿಗೊಂದು ಪುಟ್ಟ ಸಲಹೆ
+ಸಂಸ್ಕೃತ,ವಿಜ್ನಾನ,ಧರ್ಮ ಇವು ಪರಸ್ಪರ ಅನ್ಯೊನ್ಯ ಆಶ್ರಯ ಹೊಂದಿರುವ ವಿಚಾರಗಳೆ?
 ಭಾರತದಂತಹ ದೇಶದಲ್ಲಿ ಹೌದು ಎನ್ನಬೇಕಾಗಬಹುದು ಎಕೆಂದರೆ ಸಂಸ್ಕೃತ ಹಾಗೂ ಜಗತ್ತಿನ ಮೊದಲ ಸಾಹಿತ್ಯ ವೇದ ಎಂದರೆ ತಪ್ಪಾಗಲಾರದು.೧)ಪಾಕಿಸ್ತಾನದ ಮೆಹರ್ ಘಡ್ ಉತ್ಖನನದಲ್ಲಿ ಸರಸ್ವತಿ ನದಿಯ ದಂಡೆಯಮೇಲೆ ಕೃ.ಪೂ ೬೫೦೦ (ಅಂದರೆ ೮೬೦೦) ವರ್ಷದ ಹಿಂದೆಯೆ ವೇದ ನಾಗರೀಕತೆ ಉಛ್ರಾಯಸ್ಥಿತಿಯಲ್ಲಿತ್ತು ಎಂದು ತಿಳಿದುಬಂದಿದೆ.(ಯಾವುದು ಚರಿತ್ರೆ ಪು ಸಂ-೨) ವೇದ ಎಂಬ ಶಬ್ದವು ವಿದ್ ಜ್ನಾನೆ ಎಂಬಧಾತು ಮೂಲೀಯ. ಜ್ನಾನ ಎಂದು ಹೆಸರಿರುವ ಈ ಭಂಡಾರವೇ ಆಧುನಿಕ ಸ್ವ ಘೊಶಿತ ವಿಚಾರವಾದಿಗಳಿಗೆ ಅಜ್ನಾನವಾಗಿ ತೋರುತ್ತಿರುವುದು ಭಾರತ ದೇಶದ ವಿಪರ್ಯಾಸ... ಇದಕ್ಕೆ ಕಾರಣವೇನು? ಎಂದು ಆಲೋಚಿಸಿ....
 ಮೆಕಾಲೆ ಶಿಕ್ಷಣ..
ಈ ಶಿಕ್ಷಣ ನೀತಿಯಿಂದ ಭಾರತದ ನವ ಪೀಳಿಗೆಯನ್ನ ಬಣ್ಣದಲ್ಲಿ ಮಾತ್ರ ಭಾರತೀಯರನ್ನಾಗಿ ಉಳಿಸುತ್ತೆನೆ ಎಂಬ ಅವನ ಪತ್ರ.
ಈ ಉದ್ದೇಶದಿಂದ ಆರಂಭವಾದ ಶಿಕ್ಷಣ ಇಂದಿಗೂ ಸಾಗುತ್ತಿರುವುದು...
ವೇದ,ಸಂಸ್ಕೃತ,ಧರ್ಮದಲ್ಲಿ ಹೇಳಿದ ವಿಚಾರ ವಿಷಯಗಳೆಲ್ಲವೂ ಅವೈಜ್ನಾನಿಕ,ಅವೆಲ್ಲಾ ಮೂಢನಂಬಿಕೆಗಳು ಎಂದು ವಾದ ಮಾಡುತ್ತಾ ತಾವು ವಿಚಾರವಾದಿಗಳು ಎಂಬ ಸೋಗಿನಲ್ಲಿರುವ ಭಾರತೀಯರೆಲ್ಲರೂ ಅಂದು ಮೆಕಾಲೆ ಕಂಡ ಕನಸಿನ ನವಪೀಳಿಗೆಯ ಕೂಸುಗಳೆ ಅಲ್ಲವೇ...?
ಕೃ.ಶ ೪ ನೇ ಶತಮಾನದಲ್ಲಿಯೇ ನಲಂದ, ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳನ್ನು ಹೊಂದಿದ ಭಾರತಕ್ಕೆ ಮೆಕಾಲೆ ಶಿಕ್ಷಣದ ಅವಷ್ಯಕತೆ ಇನ್ನೂ ಇದೆಯೆ....?
ಧರ್ಮವನ್ನು& ಸಂಸ್ಕೃತ ಸಾಹಿತ್ಯವನ್ನು ಪ್ರಶ್ನಾತೀತವಾಗಿ ಅಂಗಿಕರಿಸಿ ಅದರಲ್ಲಿ ಹೇಳಿದಂತೆಯೇ ನೆಡೆಯಬೇಕೆಂದು ನಾನು ಹೇಳುತ್ತಿಲ್ಲ ಆದರೆ ನಮ್ಮ ಪೂರ್ವಿಕರು ವೈಜ್ನಾನಿಕವಾಗಿ ಎಷ್ಟುಮುಂದುವರೆದಿದ್ದರು ಎನ್ನುವ ವಿಚಾರದತ್ತ ಗಮನ ಸೆಳೆಯುವದೇ ಈಲೆಖನದ  ಉದ್ದೆಶವಾಗಿದೆ. ವೇದ ಹಾಗೂ ಸಂಸ್ಕೃತದಲ್ಲಿ ಅಡಕವಾಗಿರುವ ಕೆಲವು ವೈಜ್ನಾನಿಕ ವಿಚಾರವನ್ನು ವೀಕ್ಷಿಸೋಣ.
೧)ಮಿತ್ರೋದಾಧಾರ ಪ್ರಥಿವಿ ಮುತದ್ಯಾಮ್| ಮಿತ್ರ ಕೃಷ್ಠಿಃ|(ತೈತ್ತರಿಯಸಂಹಿತಾ೩.೪.೧೦ ,೩-೪ ಹೆಮ್ಮೆಯ ವಿಜ್ನಾನ ಪರಂಪರೆ)
ಸೂರ್ಯನು ಭೂಮಿಯನ್ನೂ ಖಗೋಲ ಕ್ಷೇತ್ರವನ್ನೂ ಧರಿಸಿದ್ದಾನೆ.ಆಕಾಶ ಕಾಯಗಳಿಗೆಲ್ಲಾ ಸೂರ್ಯನೇ ಅತ್ಯಂತ ಆಕರ್ಶಣೀಯ ಶಕ್ತಿ
೨)ತ್ರಿನಾಭಿಚಕ್ರಮಜರಮನರ್ವಂ ಯತ್ರೇಮಾ ವಿಶ್ವಾ ಭುವನಾನಿತಸ್ಥುಃ| ( ಋಗ್ವೇದ ೧.೧೬೪.೨ ಹೆಮ್ಮೆಯ ವಿಜ್ನಾನ ಪರಂಪರೆ)
ಆಕಾಶ ಕಾಯಗಳ ದೀರ್ಘವೃತ್ತಾಕಾರಕ ಮಾರ್ಗವು ಅವಿನಾಶಿ ಹಾಗೂ ಅಚ್ಛಿದ್ರಕಾರಿ.( ಪಾಶ್ಚಾತ್ಯ ಖಗೋಲ ಪರಂಪರೆಯಲ್ಲಿಕ
ಕೋಪರ್ನಿಕಸ್ ನ ಕಾಲದವರೆಗೂ(೧೪೭೩-೧೫೪೩)ಗ್ರಹಗಳು ಮತ್ತು ಬೇರೆ ಆಕಾಶಕಾಯಗಳು ವರ್ತುಲ ಕಕ್ಷೆಯಲ್ಲಿಯೇ ಚಲಿಸುತ್ತವೆಂದು ನಂಬಲಾಗಿತ್ತು.ಜೊಹಾನ್ಸ್ ಕೆಪ್ಲರನು ೧೬೦೯ರಲ್ಲಿ ಗ್ರಹಗಳು ಮತ್ತು ಬೇರೆ ಆಕಾಶಕಾಯಗಳ ಭ್ರಮಣ ಮಾರ್ಗವು ದೀರ್ಘವೃತ್ತಾಕಾರಕವಾದುದು ಎಂದು ಪ್ರತಿಪಾದಿಸಿದನು.
೩)ಆಯಂ ಗೌಃ ಪೃಶ್ನಿರಕ್ರಮೀದಸನ್ ಮಾತರಂ ಪುನಃ | ಪಿತರಂ ಚ ಪ್ರಯಂತ್ಸುವಃ|( ಋಗ್ವೇದ ೧೦.೧೮೯.೧ ತೈತ್ತರಿಯಸಂಹಿತಾ ೧.೫.೩-೨ ಹೆಮ್ಮೆಯ ವಿಜ್ನಾನ ಪರಂಪರೆ)
ಭೂಮಿಯ ಉಪಗ್ರಹವಾದ ಚಂದ್ರನು ತನ್ನ ಮಾತೃಗ್ರಹವಾದ ಭೂಮಿಯ ಸುತ್ತಲೂ ಸುತ್ತುತ್ತಾನೆ. ಹಾಗೆಯೇ ಸ್ವಯಂ ಪ್ರಕಾಶಿಯಾದ ಪಿತೃಗ್ರಹವಾದ ಸೂರ್ಯನನ್ನೂ ಸುತ್ತುತ್ತಾನೆ.
೪)ಛಾದಯತಿ ಶಶೀ ಸೂರ್ಯಂ ಶಶಿನಂ ಮಹತೀ ಚ ಭೂಚ್ಛಾಯಾ -(ಆರ್ಯಭತಟೀಯ,ಗೋಲಪಾದ ೩೭{ಕೃಶ ೪೯೯}
ಹೆಮ್ಮೆಯ ವಿಜ್ನಾನ ಪರಂಪರೆ)
ಚಂದ್ರನು ಸೂರ್ಯನನ್ನು ಆವರಿಸುತ್ತಾನೆ ಹಾಗೂ ಭೂನಿಯ ಮಹಾಛಾಯೆಯು ಚಂದ್ರನನ್ನು ಆವರಿಸುತ್ತದೆ. ಆರ್ಯಭಟನು ಸಾವಿರಾರು ವರ್ಷದ ಹಿಂದೆಯೇ ಗ್ರಹಣರಹಸ್ಯವನ್ನು ತೆರೆದು ತೋರಿಸಿದ್ದಾನೆ.
೫)ಆಕೃಷ್ಟಿಶಕ್ತಿಶ್ಚ ಮಹೀ ತಯಾತತ್ ಖಸ್ಥಂ ಗುರು ಸ್ವಾಭಿಮುಖಂ ಸ್ವಶಕ್ತ್ಯಾ|
ಆಕೃಷ್ಯತೇ ತತ್ಪತತೀವ ಭಾತಿ ಸಮೇ ಸಮಂತಾತ್ ಕ್ವ ಪತಿತ್ವಿಯಂ ಖೆ||( ಸಿದ್ದಾಂತ ಶಿರೋಮಣಿ,ಭುವನಕೋಶಃ-೬ [೫೨೮]
ಹೆಮ್ಮೆಯ ವಿಜ್ನಾನ ಪರಂಪರೆ)
ಭೂಮಿಯು ಆಕರ್ಷಣಶಕ್ತಿಯಿಂದ ಕೂಡಿದ್ದು ಅದರಿಂದ ಆಗಸದಲ್ಲಿರುವ ದೊದ್ಡ ಪದಾರ್ಥಗಳು ಬಲವಾಗಿ ತನ್ನೆಡೆಗೆ ಆಕರ್ಷಿಸಲ್ಪಡುತ್ತವೆ. ಅವು ನಮಗೆ ಬಿಳುತ್ತಿವೆಯೆಂಬಂತೆ ಭಾಸವಾಗುತ್ತವೆ. ಆದರೆ ಎಲ್ಲೆಡೆಯೂ ನಿರಾಧಾರವಾಗಿ ಸಮನಾಗಿರುವ ಆಕಾಶದಲ್ಲಿ ಇದು ಎಲ್ಲಿ ತಾನೆ ಬೀಳಲು ಸಾದ್ಯ?
ಇಸಾಕ್ ನ್ಯುಟನ್ ನು [೧೬೪೨-೧೭೨೧]ಇದೇ ಗುರುತ್ವಾಕರ್ಷಣ ಶಕ್ತಿಯ ನಿಯಮಗಳನ್ನು ಪ್ರತಿಪಾದಿಸಿಯೇ ಖ್ಯಾತಿ ಪಡೆದದ್ದು!
ಇವಲ್ಲದೆ ಇನ್ನೂ ಅನೇಕ  ಖಗೋಳ ಶಾಸ್ತ್ರ ವಿಚಾರಗಳು ನಮ್ಮ ವೇದ ಹಾಗೂ ಸಂಸ್ಕೃತ ಸಾಹಿತ್ಯಗಳಲ್ಲಿ ಅಡಕವಾಗಿವೆ. ಇನ್ನು ಯಂತ್ರ ವಿಮಾನ ಇತ್ಯಾದಿ ವಿಚಾರವನ್ನ ನೋಡೋಣ........
 ೧) ದಂಡೈಶ್ಚಕ್ರೈಶ್ಚ ಸರಣಿಭ್ರಮಣಾದಿಭಿಃ|ಶಕ್ತೇರುತ್ಪಾದನಂ ಕಿಂ ವಾ ಚಾಲನಂ ಯಂತ್ರಮುಚ್ಚತೇ||(ಯಂತ್ರಾರ್ಣವ ೧೪ನೆ ಶತಮಾನ ಹೆಮ್ಮೆಯ ವಿಜ್ನಾನ ಪರಂಪರೆ)
ಚಾಲಕದಂಡ,ಬೆಣೆ ಅಥವಾ ಚಕ್ರಗಳ ಚಾಲನೆ ಅಥವಾ ನಿರಂತರ ಭ್ರಮಣೆಯಿಂದ ಶಕ್ತಿಯನ್ನು ಉತ್ಪಾದಿಸುವ ವ್ಯವಸ್ಥೆಯುಳ್ಳ ಸಾಧನವನ್ನೆ ಯಂತ್ರ ಎನ್ನುತ್ತಾರೆ.
ಹೇಗಿದೆನೋಡಿ ಯಂತ್ರದ ವ್ಯಾಖ್ಯೆ..
೨)ಷೋಡಶಾಂಗುಲವಿಸ್ತೀರ್ಣೊ ಹಸ್ತಮಾತ್ರಾಯತಂ ಸಮಂ ಧಾತುಸತ್ವ ನಿಪಾತಾರ್ಥೇ ಕೋಷ್ಠೀಯಂತ್ರಮಿತಿ ಸ್ಮೃತಂ|
ಪರಿಪೂರ್ಣದೃಢಾಂಗಾರೈರಧೋವಾತೇನ ಕೋಷ್ಠಕೇ ಮಾತ್ರಯಾ ಜ್ವಾಲಮಾರ್ಗೇಣ ಜ್ವಾಲಯೇಚ್ಚ ಹುತಾಶನಂ||-  -ರಸಸಮುಚ್ಚಯ ೯~೪೩. ೧೨ನೆ ಶತಮಾನ
೧೬ಹಸ್ತ ಅಗಲ ಹೊಂದಿರುವ,೧೮ ಅಂಗುಲ ಉದ್ದ ಹಾಗೂ ಎತ್ತರ ಹೊಂದಿರುವ,ಎಲ್ಲಾಕಡೆಯಲ್ಲೂ ಸಮಾನವಾಗಿರುವ ಕುಲುಮೆಯನ್ನು ಕೋಷ್ಠೀಯಂತ್ರವೆನ್ನುವರು.ಅದಿರು ಹಾಗೂ ಖನಿಜದಿಂದ ಶುದ್ದ ಲೋಹವನ್ನು ಬೇರ್ಪದಿಸಲು ಈ ಉಪಕರಣವನ್ನು ಉಪಯೋಗಿಸಲಾಗುವದು

ಭರದ್ವಾಜ ಮುನಿಯ ವ್ಯೋಮಶಾಸ್ತ್ರದಲ್ಲಿ ೩೬ ಬಗೆಯ ವಿಮಾನವನ್ನೂ,ವಿಮಾನಚಾಲಕರು ಅನುಸರಿಸಬೇಕಾದ ನಿಯಮಗಳನ್ನೂ ಬರೆದಿರುತ್ತಾರೆ.                     
                                                                                                  ಮುಂದುವರೆಯುವದು.......                                                                                     

Sunday 3 April 2011

sujnaanavedike



ಸುಜ್ನಾನ ವೇದಿಕೆಯ ಎಲ್ಲಾ ಸದಸ್ಯರಿಗೂ ನಿಮಗೂ ನಿಮ್ಮ ಬಂದು, ಮಿತ್ರ,ವರ್ಗಕ್ಕು ಸಂಸ್ಥೆಯಪರವಾಗಿ ಖರ ಸಂವತ್ಸರದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು