Monday 1 April 2013

ಹಳೆಯ ನೋವನೆಲ್ಲ ಮರೆತು ಮುದದಿ ಇಂದು ಎಲ್ಲ ಬೆರೆತು ವರುಷ ಫಲವ ಕೇಳಿ ಕುಳಿತು ಬಾಳು ಎಂಬ ಆಶಯಾ ಯುಗಾದಿಯಾ ಶುಭಾಶಯ ಮುಂದೆ ನಮಗೆ ಶುಭವು ಇಹುದು ಎಂದು ಕೇಳ್ದ ಫಲವ ನೆನೆದು ಬಾಳ್ವೆಯಲ್ಲಿ ಅರ್ಥ ಇಹುದು ಎಂಬುದಿದರ ಆಶಯಾ ಯುಗಾದಿಯಾ ಶುಭಾಶಯ ಮಧು ಮಾಸವು ಬಂತು ನೋಡಿ ಜೇನ ಸವಿಯ ಜೋತೆಯ ಗೂಡಿ ಬೇವ ಕಹಿಯ ಹೊರಗೆ ದೂಡಿ ನಿಮಗಿದೋ ಶುಭಾಶಯ ಯುಗಾದಿಯಾ ಶುಭಾಶಯ ಆತ್ಮೀಯತೆಯಿಂದ -ಅನಂತ ಭಟ್ಟ ನಂದನ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು..
(ದಾಟಿ-ತಾಯಿ ಶಾರದೆ ಲೋಕ ಪೂಜಿತೆ) ಮತ್ತೆ ಬಂದಿದೆ ಮುದವ ತಂದಿದೆ ನವಯುಗಾದಿಯು ಇಂದಿದೆ ಬೇವು ಬೆಲ್ಲದ ತೆರದಿ ಜೀವನ ಎಂಬಸಾರವ ಸಾರಿದೆ ನೋವು ನಲಿವಿನ ನಡುವೆ ಜೀವನ ಎಂಬುದನು ನೀವ್ತಿಳಿಯಿರಿ ನೋವನೆಲ್ಲನು ಮರೆತು ಮುಂದಕೆ ಸುಖವ ಅರೆಸುತ ಸಾಗಿರಿ ತಳಿರು ಚಿಗುರಿದೆ ಮಾವು ತೆಂಗಲಿ ಪ್ರಕೃತಿ ನೂತನವಾಗಿದೆ ಹಳೆಯ ಎಲೆಗಳು ಉದುರಿವೇ ನವ ತಳಿರು ಮರದಲಿ ಚಿಗುರಿದೇ ಅದರ ತೆರದಲಿ ನಮ್ಮ ಬದುಕಲಿ ವರುಷ ಒಂದು ಸಂದಿದೆ ಹಳತು ಹಿಂದಿದೆ ಹೊಸತು ಮುಂದಿದೆ ಅದುವೇ ವರುಷ ನಂದನ ಬಂದಿದೆ ನವ ಯುಗಾದಿಯು ತಂದಿದೆ ನಮಗ್ ಹರುಷವ ಶುಭವ ತರಲಿ ನಮಗೆ ಎಂದು ಭಕ್ತಿ ಭಾವದಿ ಬೇಡುವ ಎಲ್ಲರಿಗೂ ಈ ನಂದನ ಸಂವತ್ಸರದ ಯುಗಾದಿಯು ಶುಭವನ್ನು ತರಲಿ ಎಂದು ಆಶಿಸುವ ನಿಮ್ಮ ಮಿತ್ರ- ಅನಂತ ಭಟ್ಟ