Friday 2 September 2011

ಓ ಭಾರತ ಮಾತೇ.. ನಿನ್ನ ಮಡಿಲಲ್ಲಿ ಇದೆಂತಹ (ಅ)ಸಮಾನತೆ!

ಭಾರತ ನಿಜವಾಗಿಯೂ ಜಾತ್ಯಾತೀತ ರಾಷ್ಟ್ರವೇ?
ಅಲ್ಲ ಎನ್ನುತ್ತದೆ ಮನಸ್ಸು.ಹೌದು ಎನ್ನುತ್ತದೆ ಸಂವಿಧಾನ. ಇವೆರಡರ ಗೊಂದಲದಲ್ಲಿ ಬುಧ್ಧಿ ಹೇಳುತ್ತದೆ ನಮಗೇಕೇ ಈ ಗೊಡವೆ ನಮ್ಮಕೆಲಸವನ್ನು ನಾವು ಮಾಡೋಣ ಎಂದು
ನಮ್ಮ ಸಂವಿಧಾನ ಸರ್ವ ಧರ್ಮ ಹಾಗು ಜಾತಿಯ ಸಮಾನತೆಯನ್ನು ಸಾರುತ್ತದೆ. ಆದರೆ ಒಂದು ಮಗು ಹುಟ್ಟಿದ ದಿನದಿಂದ ಸಾಯುವವರೆಗೂ ಸರಕಾರಿ ಕಛೆರಿಗಳಲ್ಲಿ ತುಂಬುವ ಪ್ರತಿಯೋಂದು ಫಾರ್ಮ್ ಗಳಲ್ಲೂ ಧರ್ಮ ಜಾತಿಯನ್ನು ತುಂಬಲೇಬೇಕು. ಎಲ್ಲಿದೆ ಸಮಾನತೆ.............?
ಹಿಂದುಳಿದ ವರ್ಗ ಎಂದರೆನು?
ಅಲ್ಪಸಂಖ್ಯಾತರು ಯಾರು?
ಈ ವಿಚಾರವನ್ನ ವಿಮರ್ಶಿಸಲೇ ಬೇಕಾದ ಪರಿಸ್ತಿತಿ ಈಗ ಸನ್ನಿಹಿತವಾಗಿದೆ.
ಹಿಂದುಳಿದ ವರ್ಗ ಎಂದರೆ ಯಾವುದರಲ್ಲಿ ಹಿಂದುಳಿದವರು ಎಂದು? ವಿದ್ಯೆಯಲ್ಲಿಯೋ,ಆರ್ಥಿಕತೆಯಲ್ಲಿಯೋ,ಬಲದಲ್ಲಿಯೋ, ಯಾವುದರಲ್ಲಿ ಹಿಂದುಳಿದವರು ಇವರು ಎನ್ನುವದನ್ನ ನೋಡಬೇಕಾಗಿದೆ.ಅಲ್ಪಸಂಖ್ಯಾತರು ಎನ್ನುವಾಗ ಯಾವವಿಚಾರದಿಂದ ಮತದ ಆಧಾರದ ಮೇಲೆ ಅಲ್ಪಸಂಖ್ಯಾತರು ಎಂದಾದರೆ ಹಿಂದು ಎನ್ನುವದು ಒಂದು ಜೀವನ ಪದ್ದತಿ. ಇದರಲ್ಲಿನ ಮತ,ಮತಾಚಾರ್ಯರು ಅದೆಷ್ಟೋ ಇವೆ ದ್ವೈತ,ಅದ್ವೈತ,ವಿಶಿಷ್ಠಾದ್ವೈತ,ಗಾಣಪತ್ಯ,ಶಾಕ್ತ,ವೈಷ್ಣವ,ಶೈವ,ಇತ್ಯಾದಿ ಇವೆಲ್ಲವೂ ಮತಗಳೇ ಆಗ ಇವೆಲ್ಲಮತಗಳಲ್ಲಿ ಯಾವ ಮತಸ್ಥರ ಸಂಖ್ಯೆ ಅಲ್ಪ ಎಂದು ನೋಡಬೇಕಾಗುತ್ತದೆ. ಹಾಗಾದರೆ ಎಲ್ಲಿ ಹೋಯಿತು ಸಮಾನತೆ?
ಈ ರೀತಿಯಲ್ಲಿ ಹಿಂದುಳಿದವರ್ಗ,ಅಲ್ಪಸಂಖ್ಯಾತರು ಇತ್ಯಾದಿ ಮೀಸಲಾತಿಯಿಂದ ನಮ್ಮ ಸಮಾಜ ಎಲ್ಲಿಗೆ ಹೋಹುತ್ತಿದೆ?
ಮಗು ಶಾಲೆಗೆ ಸೇರುವಾಗ ಮೀಸಲಾತಿ,ಉದ್ಯೋಗಕ್ಕೆ ಸೇರುವಾಗ ಮೀಸಲಾತಿ,ಪ್ರಮೋಶನ್ ವಿಚಾರದಲ್ಲಿ ಮೀಸಲಾತಿ ಎಲ್ಲಿಯವರೆಗೆ ಈ ಮೀಸಲಾತಿ........!!
ಮೀಸಲಾತಿಯನ್ನು ನೀಡಲು ಸರಿಯಾದ ಒಂದು ಕಾರಣವನ್ನು ನೀಡಿ ಎಂದು ಹೇಳಿದಾಗ ಇತಿಹಾಸವನ್ನು ಹೇಳುವ ವಿಚಾರವಾದಿಗಳು ಮುಸ್ಲಿಮರ ವಿಚಾರದಲ್ಲಿ ಇತಿಹಾಸವನ್ನು ಮರೆತೇಬಿಡುತ್ತಾರೆ. ಬ್ರಾಮ್ಹಣರು ಹಿಂದುಳಿದವರ್ಗವನ್ನು ತುಳಿದರು ಎನ್ನುವ ಬುದ್ದಿಜೀವಿಗಳು ಮುಸ್ಲೀಮರು ಹಿಂದುಗಳನ್ನುಕೊಂದರು ಎನ್ನುವದಿಲ್ಲ ಏಕೆ?ಮುಸ್ಲೀಮ್ ರಾಜರು ಹಿಂದೆ ಮಾಡಿರುವ ದೌರ್ಜನ್ಯ,ಆಕ್ರಮ.ಮತಾಂಧತೆ,ಇತ್ಯಾದಿಗಳನ್ನು ಹೇಳಿದರೆ ಈಗಿನ ಭಾರತೀಯ ಮುಸ್ಲಿಮರಿಗೆಲ್ಲಿ ನೋವಾದೀತೋ ಎಂದು ಮರುಗುವ ನಮ್ಮ ಹೃದಯವಂತ ವಿಚಾರವಾದಿಗಳ,ರಾಜಕಾರಣಿಗಳ,ಪ್ರಗತಿಪರರ ಹೃದಯ  ಬ್ರಾಮ್ಹಣರು ಹಿಂದುಳಿದ ವರ್ಗವನ್ನ ತುಳಿದರು ಎಂದಾಗ ಭಾರತೀಯ ಸಂವಿಧಾನಕ್ಕೆ ಬಧ್ಧರಾಗಿರುವ ಬ್ರಾಮ್ಹಣ ನವಪೀಳಿಗೆಗಳಿಗೆ ನೋವಾದೀತು ಎಂದೇಕೇ ಮಿಡಿಯುವದಿಲ್ಲ.ಹಾಗಾದರೆ ಬ್ರಾಮ್ಹಣರ ಪೂರ್ವಿಕರು ಸಮಾಜಕ್ಕೆ ಏನೂ ಕೊಡಿಗೆಗಳನ್ನೆ ನೀಡಿಯೇ ಇಲ್ಲವೇ "ಚಂದ್ರಗುಪ್ತಮೌರ್ಯನ (ಮೌರ್ಯಸಾಮ್ರಾಜ್ಯ) ಸುವರ್ಣಯುಗ ಎಂದು ಕರೆಸಿಕೊಂಡ  ಸಮ್ರಾಜ್ಯ ಸ್ಥಾಪನೆಗೆ ಕಾರಣ- ಆಚಾರ್ಯ್ ಚಾಣಕ್ಯ"
ಮುತ್ತುರತ್ನಗಳನ್ನ ದಾರಿಯಲ್ಲಿಟ್ಟು ಬಳ್ಳಗಳಲ್ಲಿ ಅಳೆದು ಮಾರಿದ ವಿಜಯನಗರ ಸಮ್ರಾಜ್ಯ ಸ್ಥಾಪನೆಗೆ ಕಾರಣ- ವಿದ್ಯಾರಣ್ಯರು, ಕದಂಬರ ಪುನರುತ್ಥಾನಕ್ಕೆ ಕಾರಣ ವಿಷ್ಣುಶರ್ಮ. ಹೀಗೆಯೆ ಎಷ್ಟೋ ಕೊಡುಗೆಯನ್ನ ಬ್ರಾಮ್ಹಣರು ಈ ದೇಶಕ್ಕೆ ನೀಡಿದ್ದಾರೆ.ಮುಸ್ಲೀಮ್ ಪೂರ್ವಿಕರು ಮಾಡಿರುವ ದೌರ್ಜನ್ಯ,ಆಕ್ರಮಣ.ಇತ್ಯಾದಿಗಳ ಫಲವಾಗಿ ಅವರಿಗೆ (ಅಲ್ಪಸಂಖ್ಯಾತರು) ಮಣೆ. ಬ್ರಾಮ್ಹಣರ ಪೂರ್ವಿಕರು ಹಾಗೂ ಸಮಾಜದಲ್ಲಿ ನೆಡೆದುಕೊಂಡು ಬಂದ ಪದ್ದತಿಯಿಂದಾಗಿ ಈಗಿನ ನವ ಪೀಳಿಗೆಗೆ ಶಿಕ್ಷೆ ಚೆನ್ನಾಗಿದೆ ಸರಕಾರ(ಸಂವಿಧಾನ)ದ "ಒಂದುಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ" ಎನ್ನುವ ಸಮಾನತಾವಾದ. ಮುತ್ತಜ್ಜ ಮಾಡಿದತಪ್ಪಿಗೆ ಮರಿಮಗನಿಗೇಕೆ ಶಿಕ್ಷೆ?

   ಹಾಗೆಂದ ಮಾತ್ರಕ್ಕೆ ಮೀಸಲಾತಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೆನೆ ಎಂದಲ್ಲ.ಆದರೆ ಎಲ್ಲಾಕ್ಷೇತ್ರದಲ್ಲೂ ಮೀಸಲಾತಿ ನೀಡಿದಾಗ ಸಮಾಜದಲ್ಲಿ ಆಗುವ ಹಾನಿ,ದುಷ್ಪರಿಣಾಮಗಳು ಏನು ಎಂಬುದನ್ನು ವಿಚಾರವಾದಿಗಳು,ರಾಜಕಾರಣಿಗಳು ಅರಿಯಬೇಕು ಎಂಬುದು ನನ್ನ ಭಾವ.ಮೀಸಲಾತಿ ಕಾರಣದಿಂದ ಎಷ್ಟು ಪ್ರತಿಭಾಪಲಾಯನವಾಗುತ್ತಿದೆ.ಇದನ್ನ  ವಿಚಾರವಾದಿಗಳೆನಿಸಿಕೊಂಡವರು ವಿಚಾರಮಾಡಲಿ.  ೩೫% ೪೦% ಅಂಕವನ್ನ ಗಳಿಸಿರುವ ಒಂದು ವ್ಯಕ್ತಿ ಶಿಕ್ಷಕನಾಗಿ ಆತ ಮುಂದಿನ ಸಮಾಜವನ್ನ ಹೇಗೆ ಕಟ್ಟಬಲ್ಲ?
೩೫% ೪೦% ಅಂಕವನ್ನ ಗಳಿಸಿರುವ ಒಂದು ವಿದ್ಯಾರ್ಥಿ ವೈದ್ಯನಾಗಿ ರೋಗಿಗಳಿಗೆ ಹೇಗೆತಾನೆ ಸರಿಯಾದ ಔಷಧ ನೀಡಬಲ್ಲ?
ಕೆಲವೊಂದು ಕ್ಷೇತ್ರದಲ್ಲಿ ಹಾಗೂ ಪ್ರಾಥಮಿಕ ಹಾಗೂ ಪೌಢ ಶಿಕ್ಷಣದಲ್ಲಿ ಮೀಸಲಾತಿಯನ್ನ ನೀಡಲಿ ನಂತರದ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಂಕವನ್ನು ಹೊಂದಿದ್ದರೆ ಮಾತ್ರ ಶುಲ್ಕಗಳ ವಿಚಾರದಲ್ಲಿ ಮಾತ್ರ ರಿಯಾಯತಿಯನ್ನ ನೀಡಲಿ ಅದು ಆರ್ಥಿಕವಾಗಿ ಬಡವರಾಗಿದ್ದರೆ ಮಾತ್ರ . ಹಿಂದುಳಿದವರ್ಗ,ಅಲ್ಪಸಂಖ್ಯಾತರು ಇತ್ಯಾದಿ ಮೀಸಲಾತಿಯಿಂದ ಸಾಮಾಜಿಕ ಅಸಮಾನತೆ ಇನ್ನಾದರೂ ನಿಲ್ಲಲಿ.ಆರಕ್ಷನ್ ದಂತಹ ಸಿನಿಮಾ ಪ್ರದರ್ಷನನ್ನ ಮಾಡಲೂ ಅಡ್ಡಿ ಆತಂಕ ಇದೆ ಎಂದಾದರೆ ಈ ಮೀಸಲಾತಿಯ ಗುಂಗು ಎಷ್ಟರಮಟ್ಟಿಗೆ ಆವರಿಸಿದೆ ಯೋಚಿಸಿ
ಇನ್ನು ಸಂತಾನ ವಿಚಾರದಲ್ಲೂ ಇದೇ ರೀತಿಯ ಸಮಾನತೆ
ಮುಸ್ಲೀಮರಿಗೆ ಎಷ್ಟು ಬೇಕಾದರೂ ಮದುವೆ ಹಾಗೂ ಮಕ್ಕಳು ಕಾರಣ ಅವರ ಧರ್ಮ
ಹಿಂದುಗಳ ವೇದದಲ್ಲಿಯೂ ಹೇಳಿದೆ "ಪ್ರಜಾತಂತುಂ ಮಾವ್ಯವಛ್ಛೆಸಿ"ಎಂಬುದಾಗಿ ಅಂದರೆ ಹಿಂದುಗಳಿಗೂ ಕುಟುಂಬ ಯೋಜನೆ ಬೇಡ ಎನ್ನಬಹುದಿತ್ತು . ಈ ಎಲ್ಲಾ ವಿಚಾರವನ್ನ ಗಮನಿಸಿದಾಗ ಮರುಗುವ ಮನಸ್ಸು ಹೇಳುವುದು .....................   "ಓಭಾರತಮಾತೇ ನಿನ್ನ ಮಡಿಲಲ್ಲಿಇದೆಂತಹ(ಅ)ಸಮಾನತೆ "                                                                                                             

No comments:

Post a Comment